ವರದಿ : ನಿತೇಶ್ ಕಿತ್ತೂರು
ಬೆಳಗಾವಿ : ಉತ್ತರ ದಕ್ಷಿಣ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರ ಮತ್ತು ಪದಾಧಿಕಾರಿಗ ಸಭೆಯನ್ನು ಬೆಳಗಾವಿ ಪಿರಣವಾಡಿಯ ರಾಮ್ ಮಿನಿ ಗಾರ್ಡನ್ದಲ್ಲ ರಾಜ್ಯಾಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ ಸಾಹೇಬರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯ ಕರ್ನಾಟಕ ರಾಷ್ಟ್ರ ಪಕ್ಷದ ಕಾರ್ಯಕರ್ತರು ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದರು.
ಸಿಎಂ ಇಬ್ರಾಹಿಂ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಜಾತ್ಯಾತೀತ ಜನತಾದಳ ಜಾತ್ಯತೀತ ಆಧಾರದ ಮೇಲೆ ಈ ಪಕ್ಷ ಬಲವಾಗಿದೆ ಮತ್ತು ಇಲ್ಲಿ ಯಾವುದೇ ಧರ್ಮ ಜಾತಿ ಭೇದಗಳ ಇಲ್ಲ ಇದೇ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜಿಲ್ಲೆ ಅವರ ಮೊಟ್ಟೆ ಹಗರಣದ ವನ್ನು ಪ್ರಸ್ತಾಪಿಸಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು ಯಾರೇ ಸಚಿವರುಗಳು ಭ್ರಷ್ಟಾಚಾರದಲ್ಲಿ ಅವರ ಮೇಲೆ ಆರೋಪಗಳು ಇದ್ದರೂ ಕೂಡ ಹಿಂದೂ ಯಾರು ಹಬ್ಬ ಸಚಿವರು ರಾಜೀನಾಮೆಯನ್ನು ನೀಡುತ್ತಿಲ್ಲ.
ಇದನ್ನು ನೈತಿಕ ದಿವಾಳಿತನ ಹೊಂದಿರುವ ಭಾರತೀಯ ಜನತಾ ಪಕ್ಷ ಇವತ್ತು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ದೋಷಭಾವ ಅನ್ನೋ ವಿಷ ಬೀಜ ಬಿತ್ತುತ್ತಾಯಿದೆ.
ಮುಂಬರುವ ದಿನಗಳಲ್ಲಿ ಜನರೇ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ 2023ರ ಚುನಾವಣೆ ಕರ್ನಾಟಕದ ದಿಕ್ಕನ್ನು ಬದಲಿಸುವ ಚುನಾವಣೆವಾಗಲಿದೆ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರದ ಅಧ್ಯಕ್ಷರಾದ ಪ್ರಮೋದ್ ಪಾಟೀಲ್. ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಾಬು ಸಾಖರೇ. ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ರುದ್ರಗೌಡ ಪಾಟೀಲ್. ಅಶೋಕ್ ಪಾಟೀಲ್ .ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ನಾಸಿರ ಭಗವಾನ್ ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷರು.ಜಿಲ್ಲಾ ಮಾಧ್ಯಮ ವಕ್ತಾರ ದಯಾನಂದ ನವಲಗುಂದಿ. ಪ್ರಮೋದ್ ಬುಗುಟೆ ವಿವೇಕಾನಂದ ಗಂಟಿ ಶಶಿಕಲಾ ಪಡಗಿ ಸಪ್ನಾ ಪಾಟೀಲ್ ಪಕ್ಷದ ಪದಾಧಿಕಾರಿಗಳು ಬೆಂಬಲಿಗರು ಉಪಸ್ಥಿತರಿದ್ದರು.