Ad imageAd image

JCB ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ರಣಕಹಳೆ

ratnakar
By ratnakar
JCB ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ರಣಕಹಳೆ
WhatsApp Group Join Now
Telegram Group Join Now

ಬೆಳಗಾವಿ: ಮುಡಾಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಹಸ್ತಕ್ಷೇಪ ಇದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಮಿತ್ರ ಪಕ್ಷಗಳು ಬೆಂಗಳೂರಿನಿಂದ ಮೈಸೂರುವರೆಗೆ 9 ದಿನಗಳ ಕಾಲ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದು ಎಂದೂ ಕಂಡರಿಯದ ಭ್ರಷ್ಟಾಚಾರದ ವಿರುದ್ಧದ ಹೋರಾಟವಾಗಿದೆ. ಏಕೆಂದರೆ ಈ ಹೋರಾಟದಲ್ಲಿ ಹೋರಾಟ ಮಾಡುವವರು ಹಾಗೂ ಯಾರ ವಿರುದ್ಧ ಹೋರಾಟ ನಡೆಯುತ್ತಿದೆ ಅವರ ಮೇಲೆಯೂ ಕೂಡ ಸಹಪಕ್ಷ ನಾಯಕರುಗಳಿಂದಲೇ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಜೆಸಿಬಿ ನಾಯಕರುಗಳಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ಜೆಸಿಬಿ ನಾಯಕರುಗಳು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಆರೋಪಗಳು ಕರ್ನಾಟಕದ ಜನತೆಗೆ ಒಂದು ವಿಶೇಷ ಮನೋರಂಜನೆ ನೀಡಿದರು ಕೂಡ ಜೆಸಿಪಿ ಪಕ್ಷಗಳಿಂದ ರಾಜ್ಯದ ಘನತೆಯನ್ನು ಗಾಳಿಗೆ ತೂರಿದಂತಾಗಿದೆ.

ಬಿಜೆಪಿ ಮಿತ್ರ ಪಕ್ಷಗಳ ವಿರುದ್ಧ ಮೈಸೂರಿನಲ್ಲಿ ಜನ ಆಂದೋಲನ ಸಮಾವೇಶ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿ ಜೆಡಿಎಸ್ ತಾವು ಸರ್ಕಾರದಲ್ಲಿ ಇದ್ದಾಗ ಯಾವ ರೀತಿ ಭ್ರಷ್ಟಾಚಾರ ನಡೆಯಿತು ಪ್ರಕರಣಗಳನ್ನು ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಈ ಎಲ್ಲಾ ಪ್ರಕರಣಗಳ ಬಗ್ಗೆ ವಿಡಿಯೋ ತುಣುಕಗಳನ್ನು ಪ್ರದರ್ಶನ ಮಾಡಲಾಯಿತು. ವಿರೋಧ ಪಕ್ಷಗಳ ಆಡಳಿತ ಅವಧಿಯಲ್ಲಿರುವಾಗ ಹೇಳಿರುವಂತಹ ಮಾತುಗಳು ಮತ್ತು ನಡೆದಿರುವ ಭ್ರಷ್ಟಾಚಾರಗಳು ಮತ್ತು ಅವರ ಸ್ವಪಕ್ಷದ ನಾಯಕರುಗಳ ವಾಕ್ ಸಮರದ ಕುರಿತು ವಿಡಿಯೋ ತುಣುಕಗಳನ್ನು ಪ್ರಸಾರ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ವೈ ವಿಜಯೇಂದ್ರ ಅವರನ್ನೇ ಗುರಿಯಾಗಿಸಿ ವಿಡಿಯೋ ತುಣುಕಗಳನ್ನು ಪ್ರದರ್ಶನ ಮಾಡಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಈ ವಿಷಯವನ್ನು ಸವಾಲಾಗಿ ಸ್ವೀಕರಿಸಿ ಮೈಸೂರು ಚಲೋ ಸಮಾರೋಪ ಸಮಾರಂಭದಲ್ಲಿ ನಾನು ಏನು ಕಮ್ಮಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಆಡಿದ ಮಾತುಗಳನ್ನು ವಿಡಿಯೋ ತುಣುಕವಾಗಿ ಪ್ರದರ್ಶನ ಮಾಡಿದರು.

ಜನ ಆಂದೋಲನ ಹಾಗೂ ಮೈಸೂರು ಚಲೋ ಪಾದಯಾತ್ರೆ ಜೆಸಿಬಿ ಪಕ್ಷಗಳ ಈ ಹೋರಾಟದಿಂದ ಕರ್ನಾಟಕದ ಜನತೆಗೆ ಏನು ಲಾಭವಾಗಿದೆ? ರಾಜ್ಯದ ಜನಸಾಮಾನ್ಯರ ಸಮಸ್ಯೆಗಳಿಗೆ ಏನು ಸಮಸ್ಯೆ ಪರಿಹಾರಕ್ಕೆ ಮಾರ್ಗ ಸಿಗಲಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಇಲ್ಲಿ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನದ ಹೊರತು ಬೇರೆ ಏನು ಲಾಭ ಇಲ್ಲ ಸರಕಾರದಲ್ಲಿರುವ ಕಾಂಗ್ರೆಸ್ ಜನರ ಜೀವನರಗೆ ನೀಡಿರುವಂತಹ ಭರವಸೆಗಳನ್ನು ಜನರಿಗೆ ತಲುಪಲು ಇನ್ನಷ್ಟು ಪರಿಶ್ರಮದ ಅವಶ್ಯಕತೆ ಇದೆ. ರಾಜಕೀಯ ಮಾಡುವ ಸಮಯ ಇದು ಅಲ್ಲ ಇದು ಆಡಳಿತರೂಢ ಪಕ್ಷ ಗಮನದಲ್ಲಿ ಇಡುವಂತ ವಿಷಯ ಬಿಜೆಪಿ ತಮ್ಮ ಆಂತರಿಕ ಸಮಸ್ಯೆಗಳಿಂದ ಬಳಲುತ್ತಾ ಇದೆ. ಈಗಾಗಲೇ ವಿಜಯಪುರ ಶಾಸಕ ಬಸವರಾಜ್ ಯತ್ನಾಳ್ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿ ತಮ್ಮ ಸ್ವಹಪಕ್ಷದಲ್ಲಿ ಬಂಡಾಯ ಎದ್ದಂತೆ ಇದೆ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸಮರ ಸಾರಿದರೆ ನಾಯಕರುಗಳು ತಮ್ಮ ನಾಯಕರುಗಳಿಗೆ ಹರಿಹಾಯುತ್ತಿದ್ದಾರೆ.

ಉತ್ತರ ಕರ್ನಾಟಕದ ನಾಯಕರಗಳು ಮತ್ತು ದಕ್ಷಿಣ ಕರ್ನಾಟಕದ ನಾಯಕರಗಳು ಎಂದು ಬಿಜೆಪಿಯಲ್ಲಿ ಎರಡು ಬಣಗಳು ಸೃಷ್ಟಿಯಾಗಿದೆ ಇದರಿಂದ ಅಖಂಡ ಕರ್ನಾಟಕಕ್ಕೂ ದಕ್ಕೆಯಾದಂತಿದೆ. ಈ ಎಲ್ಲಾ ಕಾರಣಗಳಿಂದಾಗಿ ಬಿಜೆಪಿಯಲ್ಲಿ ನಾಯಕರಗಳ ಮಧ್ಯೆ ಸರಿಯಿಲ್ಲ ಎಂಬುದು ಸ್ಪಷ್ಟ ಸಂದೇಶ ಕರ್ನಾಟಕದ ಜನತೆಗೆ ನೀಡಿದ್ದಾರೆ. ಬಿಜೆಪಿ ವಿರುದ್ಧವೇ ಸ್ವಪಕ್ಷದ ನಾಯಕರಗಳು ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಒಂದು ಗಂಭೀರ ವಿಷಯ ಸರಿ. ಇದನ್ನು ಪಕ್ಷದ ನಾಯಕರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಪಕ್ಷದ ಹಿತೈಷಿಗಳು ಸಲಹೆ ನೀಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ರಾಜ್ಯದಲ್ಲಿ ಹಾಸ್ಯಸ್ಪದವಾಗಿ ನಿಲ್ಲಬಾರದು ಹೋರಾಟಗಳ ಗಂಭೀರತೆ ಇರಲಿ ಜನರ ಮತ್ತು ಅವರ ನಂಬಿಕೆಯ ಮೇಲೆ ಗಾಂಭೀರ್ಯತೆ ಇರಲಿ.

WhatsApp Group Join Now
Telegram Group Join Now
Share This Article