ಬೆಳಗಾವಿ: ಖಾನಾಪುರ್ ಮತಕ್ಷೇತ್ರದ ಅಭಿವೃದ್ಧಿ ರಥವನ್ನು ಯಶಸ್ವಿಯಾಗಿ ಎಳೆದುಕೊಂಡು ಹೋಗುತ್ತಿರುವ ಮಾಜಿ ಶಾಸಕಿ ಡಾ.ಅಂಜಲಿ ತಾಯಿ ನಿಂಬಾಳ್ಕರ್ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಮುನ್ನೋಟವನ್ನು ಬರೆದ ಧೀಮಂತ ನಾಯಕಿ.
ಡಾ. ಅಂಜಲಿತಾಯಿ ನಿಂಬಾಳ್ಕರ್ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಮತಕ್ಷೇತ್ರದಿಂದ ಮೊದಲನೆಯ ಮಹಿಳಾ ಕಾಂಗ್ರೆಸ್ ಶಾಸಕಿಯಾಗಿ ಚುನಾಯಿತಗೊಂಡರು. ಬೆಳಗಾವಿ ಜಿಲ್ಲೆಯ ಗಡಿಭಾಗದ ಹಾಗೂ ಭಾಷಾ ಸಂಘರ್ಷಕ್ಕೆ ಹೆಸರುವಾಸಿಯಾಗಿರುವ ಖಾನಾಪುರ ಕ್ಷೇತ್ರದ ಜನತೆ ಡಾ ಅಂಜಲಿ ನಿಂಬಾಳ್ಕರ್ 2018ರಲ್ಲಿ ಭರವಸೆ ಇಟ್ಟು ಇವರನ್ನು ಆಯ್ಕೆ ಮಾಡುತ್ತಾರೆ. ಆ ಭರವಸೆಗೆ ಜನತೆಯ ಆಶೀರ್ವಾದ ರೂಪದಲ್ಲಿ ಪಡೆದ ಖಾನಾಪುರ ಕ್ಷೇತ್ರ ದಶಕಗಳಿಂದ ಅಭಿವೃದ್ಧಿ ಹೆಸರೇ ಕೇಳದ ಈ ಕ್ಷೇತ್ರದ ಜನತೆಗೆ ಅಭಿವೃದ್ಧಿಯ ಪರವಾದ ಚಿಂತನೆಗಳಾಗಲಿ ಕ್ಷೇತ್ರದ ಜನತೆ ಮರೆತು ಹೋಗಿರುವ ಹಾಗಿತ್ತು ಅದಕ್ಕೆ ಅಭಿವೃದ್ಧಿಯ ಸಂಜೀವಿನಿ ಯಾಗಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಕಾರ್ಯಪ್ರವೃತ್ತರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಅನೇಕ ಸಮಸ್ಯೆಗಳ ಸರಮಾಲೆ ಇವರ ಮುಂದೆ ಸವಾಲುಗಳಾಗಿ ಬಂದು ನಿಲ್ಲುತ್ತವೆ. ಖಾನಾಪುರ 2019ರಲ್ಲಿ ಎಂದು ಕಂಡರಿಯದ ಪ್ರವಾಹ ಖಾನಾಪುರ ಜನತೆಗೆ ಸಂಕಟಕ್ಕೆ ದೂಡಿತು ಆ ಸಂಕಟದ ಸಮಯದಲ್ಲಿ ಕೈಗೊಂಡಿರುವಂತಹ ಪರಿಣಾಮಕಾರಿಯಾಗಿ ಪರಿಹಾರವನ್ನು ಅತ್ಯಂತ ಪರಿಣಾಮಕಾರಿಯ ಕಾರ್ಯನಿರ್ವಹಿಸುವುದು ಒಂದು ಮಾದರಿಯೆ ಸರಿ.
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಸರ್ಕಾರದ ಪರಿಹಾರವನ್ನು ನೀಡುವ ಸಂದರ್ಭದಲ್ಲಿ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಂಡಿರುವುದು ಗಮನಾರ್ಹ. ಇವರು ಕೈಗೊಂಡಿರುವಂಥ ಕಾರ್ಯಗಳಲ್ಲಿ ಒಂದೊಂದು ವಿಷಯಗಳನ್ನು ಉಲ್ಲೇಖ ಮಾಡುತ್ತಾ ಹೋದರೆ ಪ್ರತಿಯೊಂದು ಕೆಲಸವು ಹಲವು ದಶಕಗಳಿಂದ ಕಾಣದೆ ಇರುವಂಥ ಅಭಿವೃದ್ಧಿ ಕಾರ್ಯಕ್ರಮಗಳು ಇವರ ಅವಧಿಯಲ್ಲಿಯೇ ಪ್ರಾರಂಭಗೊಂಡವು.
ಕ್ಷೇತ್ರದ ಜನತೆಗೆ ಹೆಚ್ಚಿನ ಶಿಕ್ಷಣ ಅವಕಾಶ ದೊರಕಬೇಕು ಹಾಗೂ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಸುಲಭವಾಗಿ ಸಿಗಬೇಕು. ಕಾಡಿನಂಚಿನಲ್ಲಿರುವಂತಹ ಗ್ರಾಮಗಳಿಗೆ ಶಿಕ್ಷಣ ದೊರಕುವಂತಾಗಬೇಕು ಎಂಬ ಕಾರಣದಿಂದಾಗಿ ಜಾಂಬೋಟಿ, ಗೋವಾ ರಸ್ತೆ ಮಧ್ಯದಲ್ಲಿರುವ ಅಮಟೆ ಗ್ರಾಮದ ಹತ್ತಿರದ ಹೆಣ್ಣು ಮಕ್ಕಳ ಸರಕಾರಿ ವಸತಿ ನಿಲಯವನ್ನು ಪ್ರಾರಂಭ ಮಾಡಿದರು ಕ್ಷೇತ್ರದ ಜನತೆಗೆ ಸುಲಭವಾಗಿ ಅದು ಹೆಣ್ಣು ಮಕ್ಕಳಿಗೆ ಮತ್ತು ಬಾಣಂತಿಯರ ಮತ್ತು ಗರ್ಭಿಣಿಯರಿಗೆ ತಾಯಿ ಮಕ್ಕಳ 60 ಹಾಸಿಗೆಗಳ ಆಸ್ಪತ್ರೆಯನ್ನು ಕಟ್ಟಡನಿರ್ಮಾಣ ಮಾಡಲಾಗಿದೆ.
ಕಾಡಂಚಿನಲ್ಲಿರುವಂತಹ ಗ್ರಾಮಗಳ ಪ್ರಾಥಮಿಕ ಶಾಲೆಗಳು ಅಂಗನವಾಡಿ ಕಟ್ಟಡಗಳು ಹಾಗೂ ರಸ್ತೆಗಳ ನಿರ್ಮಾಣ ವಿದ್ಯುತ್ ಸಂಪರ್ಕ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ವೈದ್ಯಕೀಯ ವ್ಯವಸ್ಥೆಯು ಕೂಡ ಇಂತಹ 10 ಹಲವಾರು ಕಾರ್ಯಕ್ರಮಗಳನ್ನು ಕ್ಷೇತ್ರದ ಜನತೆಯ ಮನೆ ಬಾಗಿಲಿಗೆ ಹೋಗಿ ತಲುಪಿದವು ಅಲ್ಲದೆ ಹೊಸದಾಗಿ ನಿರ್ಮಾಣಗೊಂಡಿರುವ ಬೀಡಿ ಪಂಚಾಯತಿ ವ್ಯಾಪ್ತಿಯಲ್ಲಿ ಹೈಸ್ಕೂಲ್ ಕಟ್ಟಡ ನಿರ್ಮಾಣ ಖಾನಾಪುರ್ – ಪಾರಿಶ್ವಾಡ ರಸ್ತ ನಿರ್ಮಾಣ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವಂತ ಡಾ ಅಂಜಲಿ ತಾಯಿ ನಿಂಬಾಳ್ಕರ್ ಕ್ಷೇತ್ರದ ಜನತೆಗಾಗಿ ಖಾನಾಪುರ ದಿಂದ ತಿರುಪತಿವರೆಗೆ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಅಂಜಲಿತಾಯಿ ನಿಂಬಾಳ್ಕರ್ ಪತಿ ಹೇಮಂತ್ ನಿಂಬಾಳ್ಕರ್ ಅವರು ಜೊತೆ ಕಾಲ್ನಾಡಿಗೆ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಕ್ಷೇತ್ರದ ಜನತೆ ಯೋಗ ಕ್ಷೇಮದ ಕುರಿತು ದೇವರ ಮರೆ ಹೋದರು ನಂತರ ಕರೋನ ಕಾಲಾವಧಿಯಲ್ಲಿ ವೈದ್ಯಕೀಯ ಸೇವೆ ಹಾಗೂ ಇವರು ಕೈಗೊಂಡಿರುವ ಕಾರ್ಯಕ್ರಮಗಳು ಒಂದು ಮಾದರಿಯೇ ಸರಿ.
ವೃತ್ತಿಪರ ವೈದ್ಯರಾಗಿ ಈ ಕಠಿಣ ಪರಿಸ್ಥಿತಿ ಮತ್ತು ಮಹಾಮಾರಿಯನ್ನು ಸವಾಲದಿಂದಲೇ ಎದುರಿಸಿದರು. ಇವೆಲ್ಲ ಪ್ರಾಕೃತಿಕ ಸಮಸ್ಯೆಗಳ ಸವಾಲುಗಳನ್ನು ಎದುರಿಸುತ್ತಲೇ ತಮ್ಮ ವಿರೋಧಿಗಳು ಹಾಗೂ ರಾಜಕೀಯ ಸವಾಲುಗಳನ್ನು ಕೂಡ ಬಹಳ ಜಾನುತನದಿಂದಲೇ ಎದುರಿಸಿ ತಮ್ಮ ರಾಜಕೀಯ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.
2023 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಕುತಂತ್ರ ಹಾಗೂ ಶ್ರೇಣಿಯಂತರದಿಂದಾಗಿ ಇವರು ಸೋಲು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಆದರೂ ತಮ್ಮ ಸೋಲಿನಿಂದ ಹಿಂಜರಿಯದೆ ತಮ್ಮ ಕ್ಷೇತ್ರದ ಜನತೆಗೆ ಹೆಚ್ಚಿನ ಕಾಂಗ್ರೆಸ್ ಸರ್ಕಾರದಿಂದ ಲಾಭ ಆಗಬೇಕೆಂಬ ಕಾರಣದಿಂದಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಇವರ ಕಾರ್ಯನಿಷ್ಠೆಯನ್ನು ಗುರುತಿಸಿ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಕ್ಕೆ 2024ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು. ಇದರಲ್ಲಿ ಕೂಡ ಅಪಾರ ಜನಪ್ರಿಯತೆ ಹಾಗೂ ಕ್ಷೇತ್ರದ ಜನತೆ ಪ್ರೀತಿ ವಿಶ್ವಾಸದಿಂದ ಇವರನ್ನು ಹಾರೈಸಿತು ಚುನಾವಣೆಯಲ್ಲಿ ಸೋಲಾದರೂ ಕೂಡ ಕ್ಷೇತ್ರದ ಜನತೆಗಾಗಿ ಸತತವಾಗಿ ಕಾರ್ಯನಿರ್ವಹಿಸುತ್ತಲೇ ಇದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರುಗಳು ಡಾ.ಅಂಜಲಿ ಹೇಮಂತ್ ನಿಂಬಾಳ್ಕರ ಅವರ ಮೇಲೆ ಅಪಾರವಾದ ವಿಶ್ವಾಸ ಮತ್ತು ಭರವಸೆ ಇಟ್ಟಿದ್ದಾರೆ ಭವಿಷ್ಯದಲ್ಲಿ ಪಕ್ಷ ಇವರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಲಿದೆ ಎಂಬ ಭರವಸೆ ಕ್ಷೇತ್ರದ ಜನತೆ ಮತ್ತು ಇವರ ಹಿತೈಷಿಗಳ ಆಸೆ ಭರವಸೆ ಇದೆ.
ಇವರ ಹುಟ್ಟು ಹಬ್ಬದ ನಿಮಿತ್ಯ ಖಾನಾಪುರ ಕ್ಷೇತ್ರದ ಜನತೆ ಹಾಗೂ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಜನತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇವರ ರಾಜಕೀಯ ಜೀವನದ ಪ್ರಯಾಣ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತಿರುವ ಪಂಚಾಯತ್ ಸ್ವರಾಜ್ ಸಮಾಚಾರ ವತಿಯಿಂದ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.