spot_img
spot_img
spot_img
21.1 C
Belagavi
Friday, September 30, 2022
spot_img

ಜಲ ಜೀವನ್ ಮಿಷನ್ ಕಾಮಗಾರಿ ಕಳಪೆ ಆರೋಪ

spot_img

ವರದಿ :ಹಣಮಂತ ದೇಶಮುಖ, ರಾಜ್ಯ ವಿಶೇಷ ಪ್ರತಿನಿಧಿ

ದೇಶದ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೂ ಪ್ರತಿನಿತ್ಯ 55 ಲೀಟರ್‌ನಷ್ಟು ನೀರನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2019ರಲ್ಲಿ ಆರಂಭಿಸಿದ್ದ ‘ಜಲ ಜೀವನ ಮಿಷನ್’ ಯೋಜನೆಯ ಅನುಷ್ಠಾನವು ಕರ್ನಾಟಕದಲ್ಲಿ ಅತ್ಯಂತ ನಿರಾಶಾದಾಯಕವಾಗಿದೆ.

2019ರ ಆಗಸ್ಟ್ 15ರಂದು ಯೋಜನೆ ಆರಂಭವಾದಾಗ ದೇಶದಲ್ಲಿ (ಗ್ರಾಮೀಣ ಪ್ರದೇಶ) ಶೇ 16ರಷ್ಟು ಮನೆಗಳಿಗಷ್ಟೇ ನಲ್ಲಿ ನೀರಿನ ಸಂಪರ್ಕವಿತ್ತು. ಈಗ ಇದರ ಪ್ರಮಾಣ ಶೇ 32.96ರಷ್ಟಿದೆ. ಆದರೆ, ಇದೇ ಅವಧಿಯಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನಲ್ಲಿ ನೀರಿನ ಸಂಪರ್ಕದ ಪ್ರಮಾಣವು ಶೇ 26.88ರಿಂದ ಶೇ 28.55ರಷ್ಟಕ್ಕೆ ಮಾತ್ರ ಏರಿಕೆಯಾಗಿದೆ.

ಯೋಜನೆ ಸರಿಯಾಗಿ ಅನುಷ್ಠಾನವಾಗದ ಎಲ್ಲಾ ರಾಜ್ಯಗಳ ಪಂಚಾಯಿತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಯೋಜನೆಯನ್ನು ಅನುಷ್ಠಾನ ಮಾಡಲು ಸಹಕಾರ ನೀಡುವಂತೆ ಕೋರಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿದ್ದು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು,

30 ಪರ್ಸೆಂಟ್ ಆರೋಪ

ತಾಲ್ಲೂಕಿನ ಕರಂಜಿ ಕೆ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸಂಬಂಧಿಸಿದಂತೆ ಇಲ್ಲೂ ಸಹ 30 ಪರ್ಸೆಂಟ್ ಆರೋಪ ಕೇಳಿಬರುತ್ತಿದೆ ,ಬೆಳಗಾವಿಯ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣದಲ್ಲಿ 40 ಪರ್ಸೆಂಟ್ ಆರೋಪ ಕೇಳಿಬಂದಿತ್ತು,ಆದರೆ ನಮ್ಮ ತಾಲ್ಲೂಕಿನಲ್ಲಿ 30 ಪರ್ಸೆಂಟ್ ಆರೋಪ ಕೇಳಿ ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ,ಆದರೆ ಬೆಳಗಾವಿಯಲ್ಲಿ ಆರೋಪ ಮಾಡಿದ್ದು ಗುತ್ತಿಗೆದಾರರು ಆದರೆ ಇಲ್ಲಿ ಆರೋಪ ಇಲ್ಲಿ ಜನರೇ ಅನುಮಾನಪಟ್ಟು ಆರೋಪ ಮಾಡುತ್ತಿದ್ದಾರೆ ,ಯಾಕೆಂದರೆ ಕಾಮಗಾರಿ ನಡೆದ ಸ್ಥಳಕ್ಕೆ ಅಧಿಕಾರಿಗಳು ಸರಿಯಾಗಿ ಭೇಟಿ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಇಲ್ಲೂ ಸಹ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜನ ಮಾತಾನಾಡಿಕೊಳ್ಳುತ್ತಿದ್ದಾರೆ

ಸಾರ್ವಜನಿಕ ವಂತಿಕೆ ಪಡೆಯದೆ ಕಾಮಗಾರಿ

ಎಲ್ಲ ರಾಜ್ಯದಲ್ಲಿ ಜಲ ಜೀವನ ಮಿಷನ ಯೋಜನೆ ಉತ್ತಮವಾಗಿ ಮುಡಿಬರಬೇಕು ಎಂದು ಸಾರ್ವಜನಿಕ ವಂತಿಕೆ ಪಡೆದು ಕಾಮಗಾರಿ ಮಾಡುವಂತೆ ನಿರ್ದೇಶನ ಮಾಡಲಾಗಿದ್ದು ,ಸಾರ್ವಜನಿಕ ವಂತಿಕೆ ಜನರಿಂದ ಪಡೆದರೆ ಜನರು ಲೆಕ್ಕ ಕೇಳುತ್ತಾರೆ ಎಂಬ ಭಯಕ್ಕೆ ಕಾಮಗಾರಿ ಮುಗಿಯುವ ತನಕ ಸಾರ್ವಜನಿಕರಿಂದ ಯಾವುದೇ ವಂತಿಕೆ ಕೇಳುತ್ತಿಲ್ಲ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ


ಕಳಪೆ ಮಟ್ಟದ ಕಾಮಗಾರಿಯ ಆರೋಪ

ಜಲ ಜೀವನ ಮಿಷನ ಯೋಜನೆಯಡಿಯಲ್ಲಿ ಮಾಡಲಾದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ ,ನೀರಿಗಾಗಿ ಊರಿನಲ್ಲಿ ಮಾಡಿದ ಪೈಪ್ ಲೈನ್ ಸರಿಯಾಗಿ ಆಗಿಲ್ಲ ಮತ್ತು ಕಾಮಗಾರಿಗೆ ಸಂಬಂಧಿಸಿದ ORDER & ESTIMATE ಪ್ರತಿ ಗ್ರಾಮ ಪಂಚಾಯಿತಿಗೆ ನೀಡಿಲ್ಲ ಎಂದು ನಾಗಮಾರಪಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ,ಇನ್ನೊಂದು ಅಚ್ಚರಿಯ ವಿಷಯ ಅಂದರೆ ಈ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ORDER & ESTIMATE ಪ್ರತಿಯನ್ನು ಗ್ರಾಮ ಪಂಚಾಯತಗೆ ನೀಡಲಾಗಿದೆ ಎಂದು ಹೇಳಿದರು ,ಆದರೆ ವಾಸ್ತವದಲ್ಲಿ ಅವರು ಪ್ರತಿಯನ್ನು ಸಲ್ಲಿಕೆ ಮಾಡಿಲ್ಲ ಈ ಕಳಪೆ ಮಟ್ಟದ ಕಾಮಗಾರಿಯಲ್ಲಿ ಅಧಿಕಾರಿಗಳು ಸಹ ಭಾಗಿಯಾಗಿರುವುದು ಎದ್ದು ಕಾಣುತ್ತಿದೆ ,

ನಮ್ಮ ಗ್ರಾಮದಲ್ಲಿ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದೆ ,ಯಾಕೆ ಈ ರೀತಿ ಅಂತ ಹೇಳಿದರೆ ನಾವು ಶಾಸಕರ ಪಕ್ಷದವರು ಅಂತ ಆವಾಜ್ ಹಾಕುತ್ತಿದ್ದಾರೆ

– ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥ

ಈ ಬಗ್ಗೆ ನನ್ನಗೆ ಮೊದಲು ಸಹ ಗ್ರಾಮಸ್ಥರಿಂದ ದೂರು ಬಂದಿದ್ದು ಅದನ್ನು ಆಧಾರಿಸಿ ನಾನು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಮಾರಪಳ್ಳಿ

ಕಾಮಗಾರಿ ಕಳಪೆ ಮಟ್ಟದಿಂದ ಕೂಡಿಲ್ಲ, ನಿಮ್ಮಗೆ ಹೇಗೆ ಬೇಕು ಹಾಗೆ ಕಾಮಗಾರಿ ಮಾಡಿಸಿಕೊಳ್ಳಿ ಎಂದು ವರದಿಗೆ ಅಭಿಪ್ರಾಯ ಕೇಳಿದ ಪತ್ರಕರ್ತನಿಗೆ ಗುತ್ತಿಗೆದಾರರು ತಿಳುವಳಿಕೆ ಹೇಳಿರುತ್ತಾರೆ ,ಕಾಮಗಾರಿಯನ್ನು ನೋಡಿಕೊಳ್ಳಬೇಕಿದ್ದಾ ಅಧಿಕಾರಿಗಳು ಎಸಿ ಕಾರಲ್ಲಿ ಆರಾಮ ಆಗಿ ಇರುತ್ತಾರೆ ಪತ್ರಕರ್ತರು ಇವರ ಕೆಲಸ ನೋಡುವುದಕ್ಕೆ ಪತ್ರಕರ್ತರು ಏನು ಇವರ ಗುಲಾಮರೇ?

ವರದಿಗೆ ಅಭಿಪ್ರಾಯ ಕೇಳಿದ ಪತ್ರಕರ್ತನಿಗೆ ನೇರವಾಗಿ ಅಭಿಪ್ರಾಯ ತಿಳಿಸಿದೆ ಗುತ್ತಿಗೆದಾರರು ವೈಯಕ್ತಿಕ ವಿಷಯ ಕುರಿತು ಚರ್ಚೆ ನಡೆಸಿ ಸತ್ಯ ಮರೆಮಾಡುವ ಕೆಲಸ ಮಾಡುತ್ತಿದ್ದಾರೆ

spot_img

Related News

ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ಧಿಡೀರ್ ದಾಳಿ

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್...

ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ 1 ವರ್ಷ ಜೈಲು, 50 ಸಾವಿರ ದಂಡ

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -