ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳಗಳಿವೆ, ಸಿದ್ದರಾಮಯ್ಯನವರದ್ದು ಒಂದು ಬಣ ಡಿಕೆ ಶಿವಕುಮಾರ್ ಅವರದ್ದೊಂದು ಬಣ ಅಂತ ಬಹಳ ಮೊದಲೇ ಹೇಳಿದ್ದೆ, ಈಗ ಅದು ಬಯಲಿಗೆ ಬರುತ್ತಿದೆ, ಇದು ಬೀದಿ ರಂಪಾಟಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಅಂತ ಶಿವಕುಮಾರ್ಗೆ ಮನವರಿಕೆಯಾಗಿದೆ, ಹಾಗಾಗೇ ಅವರು ಜಿ ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ಗೆ ಬ್ರೇಕ್ ಹಾಕಿದ್ದಾರೆ ಮತ್ತು ತಾವು ಶತ್ರು ಸಂಹಾರ ಯಾಗ ಮಾಡುತ್ತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು. ಒಟ್ಟಿನಲ್ಲಿ ಸರ್ಕಾರದ ಅಂತ್ಯ ಹತ್ತಿರವಾಗಿದೆ ಎಂದು ಸಂಸದ ಹೇಳಿದರು.