ಹಳೆ ಸಂಸತ್ ಭವನ ಬಿಟ್ಟು ಹೋಗುವುದು ಕಷ್ಟದ ಕೆಲಸ. ಹಳೆಯ ಮನೆಯನ್ನು ಬಿಟ್ಟು ಹೋಗುವುದು ಒಂದು ಕುಟುಂಬಕ್ಕೆ ಎಷ್ಟು ಕಷ್ಟವೋ ಹಾಗೆ ಕಷ್ಟವಾಗುತ್ತದೆ. ಅನೇಕ ಕಹಿ, ಸಿಹಿ ನೆನಪುಗಳ ಮಿಳಿತ ಹಳೆಯ ಸಂಸತ್ ಭವನದಲ್ಲಿದೆ. ಸಂಘರ್ಷದ ಘಟನೆಗಳು ಈ ಸಂಸತ್ ಭವನದಲ್ಲಿ ನಡೆದಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ಹಳೆಯ ಸಂಸತ್ ಭವನವನ್ನು ವಿದೇಶಿಗರು ಕಟ್ಟಿರಬಹುದು. ಭವನ ಕಟ್ಟಲು ಈ ದೇಶದ ಜನರು ಬೆವರು ಹರಿಸಿದ್ದಾರೆ. ಈ ದೇಶ ಹಣದಿಂದ ಸಂಸತ್ ಭವನ ಕಟ್ಟಲಾಗಿದೆ. ಮುಂದೆ ಹೊಸ ಸಂಸತ್ ಭವನಕ್ಕೆ ಹೋಗಲಿದ್ದೇವೆ. ಹಳೆ ಸಂಸತ್ ಭವನ ನಮಗೆ ಯಾವಾಗಲು ಪ್ರೇರಣೆ ನೀಡಲಿದೆ ಎಂದರು.
ಇಡೀ ವಿಶ್ವವೇ ಭಾರತದ ಸ್ನೇಹವನ್ನು ಸ್ವೀಕರಿಸಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರ. ಸಂಸತ್ಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿ. ಹಳೆಯ ಸಂಸತ್ ಭವನ ಬಿಟ್ಟು ಹೋಗುವುದು ಕಷ್ಟದ ಕೆಲಸ. ಹಳೇ ಮನೆ ಬಿಟ್ಟು ಹೋಗಲು ಕುಟುಂಬಕ್ಕೆ ಎಷ್ಟು ಕಷ್ಟವೋ ಹಾಗೆ. ಅನೇಕ ಕಹಿ, ಸಿಹಿ ನೆನಪುಗಳ ಸಮ್ಮಿಲನ ಹಳೆಯ ಸಂಸತ್ ಭವನ. ಒಂದು ಕುಟುಂಬ ಹಳೇ ಮನೆ ಬಿಟ್ಟು ಹೋಗಲು ಆಗಲ್ಲ. ಈ ಸದನ ಬಿಟ್ಟು ಹೊಸ ಸದನಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದಾಗ ಭಾವುಕನಾಗಿದ್ದೆ. ಸಂಸತ್ ಭವನದ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕಾರ ಮಾಡಿದ್ದೆ. ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಪ್ರಧಾನಿ ಹೇಳಿದರು.
ನೂತನ ಸಂಸತ್ನ ಪ್ರವೇಶದ ದ್ವಾರದಲ್ಲಿ ಜನರಿಗಾಗಿ ಬಾಗಿಲು ತೆರೆಯಿರಿ ಎಂಬ ವಾಕ್ಯವಿದೆ. ಇದನ್ನು ಋಷಿ ಮುನಿಗಳು ಇದನ್ನು ಬರೆದಿದ್ದಾರೆ. ಆರಂಭದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ದಿನ ಕಳೆದಂತೆ ಮಹಿಳಾ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಿದೆ. ವಾದ-ಪ್ರತಿವಾದ ಪ್ರತಿಯೊಂದು ನಮಗೆ ಅನುಭವ ಆಗಿದೆ. ನಮ್ಮ ಕುಟುಂಬದ ನಡುವೆ ವಾದ ಆಗಿದೆ. ಈವರೆಗೂ 7,500 ಸಂಸದರು ಸಂಸತ್ನಲ್ಲಿ ಸೇವೆ ಸಲ್ಲಿಸಿದ್ದಾರೆ. 600ಕ್ಕೂ ಹೆಚ್ಚು ಮಹಿಳೆಯರು ಸಂಸತ್ನ ಗೌರವ ಹೆಚ್ಚಿಸಿದ್ದಾರೆ. ಎರಡು ಸದನಗಳ ಸದಸ್ಯರು ಸಂಸತ್ ಮೂಲಕ ಸೇವೆ ಸಲ್ಲಿಸಿದ್ದಾರೆ ಎಂದರು.