ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಆಯುಕ್ತರು ಸಹಿ ಮಾಡಿರುವ ಕಡತ ಮಾಯವಾಗಿರುವ ಕುರಿತು ಶಾಸಕ ರಾಜು ಸೇಟ ಪ್ರತಿಕರಿಸಿದ,
ಅವರು ಮಹಾಪೂರ ಹಾಗೂ ಆಯುಕ್ತರು ಸಹಿ ಮಾಡಿರುವ ಕಡತ ಒಂದು ನಕುಲ್ ಪ್ರತಿ ನಮಗೆ ಬಂದು ತಲುಪಿದೆ, ಆದರೆ ಮೂಲ ಪ್ರತಿ ನಮಗೆ ಸಿಗುತ್ತಾ ಇಲ್ಲ ಅದರಿಂದಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಹಾಗೂ ನಾವು ಪೊಲೀಸ್ ತನಿಖೆಗೆ ಆದೇಶ ನೀಡಿದ್ದೇವೆ .
ತನಿಖೆ ನಡೆಯುತ್ತಿದೆ ಮಹಾನಗರ ಪಾಲಿಕೆ ಗುತ್ತಿಗೆ ಆಧಾರದ ಮೇಲೆ 138 ವಾಹನ ಚಾಲಕ ಪೌರಕಾರ್ಮಿಕರು ಕಳೆದ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಕಳೆದ ವರ್ಷದಿಂದ ವೇತನ ಸಂದಾಯವಾಗಿಲ್ಲ ಆದ್ದರಿಂದ ವೇತನ ಸಂದಾಯವಾಗಬೇಕೆಂದು ಪೌರಕಾರ್ಮಿಕರ ವಾಹನ ಚಾಲಕರುಗಳು ಧರಣಿ ಸತ್ಯಾಗ್ರ ಮಾಡಿದ್ದರು, ಈ ವಿಷಯದ ಕುರಿತು ಸ್ಥಳಕ್ಕೆ ನಾನು ಭೇಟಿ ನೀಡಿ ಅವರ ವಿಷಯಗಳನ್ನು ಆಲಸಿ ನಂತರ ಈ ವಿಷಯದ ಕುರಿತು ಅಧಿಕಾರಿಗಳಿಗೆ ಪ್ರಶ್ನಿಸಿದರೆ ನಮ್ಮ ಹತ್ತಿರ ಯಾವುದೇ ರೀತಿಯ ಇವರ ನೇಮಕಾತಿ ಕಾಗದ್ ಪತ್ರಗಳು ಇಲ್ಲ. ಎಂದು ಸ್ಪಷ್ಟವಾದ ಉತ್ತರನೀಡಿದಾರೆ.
ಹಾಗಾದ್ರೆ ಇವರು ಕಾರ್ಯನಿರ್ವಹಿಸುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರೆ ಅಧಿಕಾರಿಗಳ ಹತ್ರ ಉತ್ತರವಿಲ್ಲ, ಈ ಎಲ್ಲಾ ಸಮಸ್ಯೆಗಳಿಗೆ ಪೊಲೀಸರಿಂದ ಪರಿಶೀಲನೆ ಮತ್ತು ತನಿಖೆ ಮಾಡಲಾಗುತ್ತಿದೆ ಮಹಾಪೌರು ಹಾಗೂ ಉಪ ಮಹಾಪೌರ ಕಚೇರಿಗಳು ಸುರಕ್ಷಿತವಾಗಿ ಇದೆಯೇ ?
ಎಂಬ ಪ್ರಶ್ನೆಗೆ ಇದನ್ನು ಜನರೇ ಹೇಳಬೇಕು.
ಕಡತಗಳು ಮಾಯವಾಗುತ್ತವೆ ಆಡಳಿತ ರೋಡ ಸದಸ್ಯರುಗಳಿಂದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಾ ಇದೆ. ಇದರಿಂದಾಗಿ ಜನರು ಆಕ್ರೋಷಿತರಾಗಿ ಪ್ರತಿಭಟನೆ ನಡೆಸುತ್ತಾ ಇದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಟ ಪ್ರತಿಕ್ರಿಯೆ ನೀಡಿದರು