ವಿಜಯಪುರ: ಕೆಲ ಬಿಜೆಪಿ ಶಾಸಕರು ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಏನಾದರೂ ಪಾಕಿಸ್ತಾನದ ಮುಖ್ಯಮಂತ್ರಿನಾ? ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಮುಖ್ಯಮಂತ್ರಿ ಅಂದರೆ ಶಾಸಕರು ಅವರ ಬಳಿ ಹೋಗುವುದು ಸಹಜ. ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನ ನೋಡಲು ಬಂದಿದ್ದರು. ಸದ್ಯ ಯಾಕೋ ಸಿದ್ದರಾಮಯ್ಯ ಅವರು ಈಗ ಬಹಳ ಸೈಲೆಂಟ್ ಆಗಿದ್ದಾರೆ. ಯಾಕೆ ಈಗ ಸೈಲೆಂಟ್ ಆಗಿದ್ದೀರಾ ಕೇಳಿದ್ದೆ. ಏನ್ ಮಾಡೋದು ಯತ್ನಾಳ್ ಇದು ನನ್ನ ಕೊನೆ ಅವಧಿ ಎಂದಿದ್ದರು. ಆದರೆ ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುತ್ತೇನೆ ಅಂತ ಹೇಳಿದ್ದರು ಎಂದು ಯತ್ನಾಳ ತಿಳಿಸಿದರು.