ಬೆಳಗಾವಿ : ಬಾಗಲಕೋಟ ಜಿಲ್ಲೆ ಜಮಖಂಡಿ ತಾಲ್ಲೂಕಿನ ಗಲಗಲಿ-ಮರೆಗುದ್ದಿ ಏತ ನೀರಾವರಿ ಯೋಜನೆಯನ್ನು 216 ಕೋಟಿ ರೂ.ವೆಚ್ಚದಲ್ಲಿ ವಿಸ್ತøತ ಯೋಜನಾ ವರದಿ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಯೋಜನೆಯಿಂದ ಎಂಟು ಗ್ರಾಮಗಳ 2035 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕಾರಜೋಳ ಅವರು, ಗಲಗಲಿ-ಮರೆಗುದ್ದಿ ಏತ ನೀರಾವರಿ ಯೋಜನೆಯನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದೆಂದು 2018-19 ರ ಆಯವ್ಯಯ ಭಾಷಣದಲ್ಲಿ ಘೋಷಣೆ ಮಾಡಲಾಗಿತ್ತು.
ಈ ಯೋಜನೆಯ 216.50 ಕೋಟಿ ರೂ.ಮೊತ್ತದ ವಿಸ್ಕ್ರಂತ ಯೋಜನಾ ವರದಿಯು ಆಡಳಿತಾತ್ಮಕ ಅನುಮೋದನೆಗಾಗಿ ಕರ್ನಾಟಕ ನೀರಾವರಿ ನಿಗಮದಿಂದ ಸ್ವೀಕೃತವಾಗಿದ್ದು,ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಅವರು ವಿವರಿಸಿದರು.
ಈ ಯೋಜನೆಯಿಂದ ಜಮಖಂಡಿ ತಾಲೂಕಿನ ಮರೆಗುದ್ದಿ, ಹುಲ್ಯಾಳ, ಸಿದ್ದಾಪುರ, ಜಮಖಂಡಿ, ಕೊಣ್ಣೂರ, ಬುದ್ನಿಹುಣಸಿಕಟ್ಟಿ ,ಗಣ ಹಾಗೂ ಮುಧೋಳ ತಾಲೂಕಿನ ಶಿರೋಳ ಮತ್ತು ಬುದ್ನಿ ಪಿ.ಎಂ.ಗ್ರಾಮಗಳ ಸುಮಾರು 2035 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ.ಕೊಣ್ಣೂರು,ಸಿದ್ದಾಪುರ ,ಜಮಖಂಡಿ ಮತ್ತು ಹುಣಸಿಕಟ್ಟೆ ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ ಎಂದು ಸಚಿವರು ಸದನದಲ್ಲಿ ವಿವರಿಸಿದರು.
ಗಲಗಲಿ-ಮರೆಗುದ್ದಿ ಏತ ನೀರಾವರಿ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಶಾಸಕ ಆನಂದ ನ್ಯಾಮಗೌಡ ಅವರು ಸಚಿವರಲ್ಲಿ ಮನವಿ ಮಾಡಿದರು.