spot_img
spot_img
spot_img
18 C
Belagavi
Thursday, September 29, 2022
spot_img

ಭೂ ಸಾಹಸ ತರಬೇತಿ ಶಿಬಿರ : ಅರ್ಜಿ ಆಹ್ವಾನ

spot_img

ಬೆಳಗಾವಿ,: 2021-22ನೇ ಸಾಲಿನ 5 ದಿನಗಳ ಜಿಲ್ಲಾ ಮಟ್ಟದ ಸಾಹಸ ತರಬೇತಿ ಕಾರ್ಯಕ್ರಮವನ್ನು ಫೆಬ್ರುವರಿ 2 ರಿಂದ 6ರ ವರೆಗೆ ಸವದತ್ತಿ ತಾಲೂಕಿನ ಸೊಗಲು ಯುವಜನ ವಸತಿ ನಿಲಯದಲ್ಲಿ 15 ರಿಂದ 35 ವರ್ಷ ವಯೋಮಿತಿಯುಳ್ಳ ಯುವಕ/ಯುವತಿಯರಿಗೆ ನಡೆಸಲಾಗುವುದು.

ಈ ತರಬೇತಿ ಶಿಬಿರದಲ್ಲಿ ಶಿಲಾರೋಹಣ, ಅವರೋಹನ, ನದಿ ದಾಟುವದು, ಪ್ರಾಣಿ ಪಕ್ಷಿ ವೀಕ್ಷಿಸುವದು, ಸರ್ಪಗಳನ್ನು ಹಿಡಿಯುವದು ಮತ್ತು ಸಂರಕ್ಷಿಸುವದು, ಕಂಪಾಸ್‌ರೀಡಿAಗ್, ಪೆಟ್ರೋಲಿಂಗ್ ಮತ್ತು ಪರಿಸರಚಾರಣ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಪ್ರತಿ ಶಿಬಿರದಲ್ಲಿ ಒಂದು ತಾಲೂಕಿನಿಂದ 10 ಜನಯುವಕ/ಯುವತಿಯರು ಈ ಪ್ರಕಾರ 100 ಜನರು ಭಾಗವಹಿಸಬಹುದಾಗಿದೆ. ಇಂತಹ ಶಿಬಿರಗಳಲ್ಲಿ ಈ ಹಿಂದೆ ಭಾಗವಹಿಸದೇ ಇರುವಂತಹ ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳ ಬೆಳಗಾವಿ ಜಿಲ್ಲೆಯ ಯುವಕ/ಯುವತಿಯರು ಇದೇ ಜನವರಿ 31 ರೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿ ಅನುಮತಿ ಪಡೆದವರನ್ನು ಮಾತ್ರ ಶಿಬಿರಕ್ಕೆ ಹಾಜರುಪಡಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಾಹಸ ತರಬೇತಿದಾರರಾದ ರಮೇಶ ಅಲಗುಡೆಕರ ಇವರ ದೂರವಾಣಿ ನಂ-9448161790 ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿಯ ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -