ಬೆಳಗಾವಿ: ಬೆಳಗಾವಿ ಮತ್ತು ಅಥಣ ಮಿಲಿಟರಿ ಬಾಲಕರ ವಿದ್ಯಾರ್ಥಿ ವಸತಿ ನಿಲಯಕ್ಕೆ 2022-23 ನೇ ಶೈಕ್ಷಣ ಕ ವರ್ಷಕ್ಕೆ ಮಾಜಿ ಸೈನಿಕರ ಹಾಗೂ ಯುದ್ಧ ಸಂತ್ರಸ್ಥರ ಮಕ್ಕಳ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.
5ನೇ ತರಗತಿಯಿಂದ ಪಿಯುಸಿ, ಡಿಪ್ಲೋಮಾ ಹಾಗೂ ಐ.ಟಿ.ಐ. ನಲ್ಲಿ ಓದುತ್ತಿರುವ ಮಾಜಿ ಸೈನಿಕರ/ಸೇವೆ ಸಲ್ಲಿಸುತ್ತಿರುವಾಗ ಮೃತರಾದ ಯೋಧರ ಗಂಡು ಮಕ್ಕಳು ಮಾತ್ರ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಊಟ ಉಪಹಾರ ಹಾಗೂ ವಸತಿ ಉಚಿತವಾಗಿ ನೀಡಲಾಗುತ್ತದೆ.
ಮಾಜಿ ಸೈನಿಕರು/ಯುದ್ಧ ಸಂತ್ರಸ್ಥರು ತಮ್ಮ ಮಕ್ಕಳಿಗೆ ವಸತಿ ನಿಲಯಕ್ಕೆ ಪ್ರವೇಶ ಬಯಸುವವರು ಜೂನ್ 15ರೊಳಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಬೆಳಗಾವಿ ಇವರಿಗೆ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಬೆಳಗಾವಿ ದೂರವಾಣ ಸಂಖ್ಯೆ 0831-2950293 ಸಂಪರ್ಕಿಸಬಹುದು ಎಂದು ಕವಾಂಡರ್ ಇಂದುಪ್ರಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.