ನವದೆಹಲಿ: ದೇಶದ ಒಟ್ಟು ಸಾಲ ಕಳೆದ ಸೆಪ್ಟೆಂಬರ್ ಅಂತ್ಯದ ವೇಳೆಗೆ 147.19 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ವರದಿ ತಿಳಿಸಿದೆ.
ಜೂನ್ ಅಂತ್ಯದ ವೇಳೆಗೆ 145 ಲಕ್ಷ ಕೋಟಿ ರೂಪಾಯಿ ಇತ್ತು. ತ್ರೈಮಾಸಿಕಕ್ಕೆ ಸಾಲದ ಮೊತ್ತದಲ್ಲಿ ಒಂದು ಪರ್ಸೆಂಟ್‌ನಷ್ಟು ಏರಿಕೆ ಆಗಿತ್ತು. ವರದಿಯ ಪ್ರಕಾರ ಒಟ್ಟು ಸಾಲದಲ್ಲಿ ಸಾರ್ವಜನಿಕ ಸಾಲ 89.1% ಆಗಿದೆ.
ಇನ್ನು 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 532 ಶತಕೋಟಿ ಡಾಲರ್‌ನಷ್ಟಿತ್ತು.