ಬೆಂಗಳೂರು: ಬಿಜೆಪಿ ಮನಿಸಲು ಸಜ್ಜಾದ INDIA 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅರ್ನಬ್ ಗೋಸ್ವಾಮಿ ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ಒಟ್ಟು 14 ಸುದ್ದಿ ನಿರೂಪಕರ ಬಹಿಷ್ಕರಿಸಿ ಗುರುವಾರ ಹೆಸರುಗಳ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿ ಪರ ಎಂದು ಗುರುತಿಸಿಕೊಂಡಿರುವ ಅಥವಾ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚಾ ಕಾರ್ಯಕ್ರಮ ನಡೆಸುವ ಆರೋಪದಡಿ ಈ ನಿರೂಪಕರನ್ನು ಬಹಿಷ್ಕರಿಸಲು INDIA ಬಣ ನಿರ್ಧರಿಸಿದೆ.
ಅದಿತಿ ತ್ಯಾಗಿ,ಅಮನ್ ಚೋಪ್ರಾ, ಅಮೀಶ್ ದೇವಗನ್, ಆನಂದ್ ನರಸಿಂಹನ್, ಅರ್ನಬ್ ಗೋಸ್ವಾಮಿ, ಅಶೋಕ್ ಶ್ರೀವಾಸ್ತವ ಚಿತ್ರ ತ್ರಿಪಾಠಿ, ಗೌರವ್ ಸಾವಂತ್, ನವಿಕಾ ಕುಮಾರ್, ಪ್ರಾಚಿ ಪರಾಶರ್, ರುಬಿಕಾ ಲಿಯಾಖತ್ ಶಿವ್ ಅರೂರ್, ಸುಧೀರ್ ಚೌಧುರಿ, ಸುಶಾಂತ್ ಸಿನ್ಹಾ ಪಟ್ಟಿಯಲ್ಲಿ ಇರುವವರಾಗಿದ್ದು, ಇವರುಗಳು ನೈಜ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ತಿರುಗಿಸುವ ಕೆಲಸವನ್ನು ಈ ನಿರೂಪಕರು ಮಾಡುತ್ತಿದ್ದಾರೆ ಎಂದು ದೂರಲಾಗಿದೆ.