spot_img
spot_img
spot_img
21.3 C
Belagavi
Sunday, October 1, 2023
spot_img

ನಿರ್ಧಿಷ್ಟ ಗುರಿಗೆ ಬದ್ಧರಾದರೆ ಯಶಸ್ಸು ಸಾಧ್ಯ: ಶರಣಯ್ಯ ಭಂಡಾರಿಮಠ

ಬಾಗಲಕೋಟೆ: ಏಕಾಗ್ರತೆ, ಸಮರ್ಥಣಾಭಾವ, ಬದ್ಧತೆ ಮತ್ತು ನಿರ್ಧಿಷ್ಟ ಗುರಿ ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗುವುದರಿಂದ ಯಶಸ್ಸು ಸಾಧ್ಯ ಎಂದು ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಅಧ್ಯಕ್ಷರಾದ ಶರಣಯ್ಯ ಭಂಡಾರಿಮಠ ಹೇಳಿದರು.

ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ, ಉದ್ಯೋಗ ಮಾರ್ಗದರ್ಶಿ ಕೋಶ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಸಂಘದ ನೂತನ ಸಬಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರೀಕರಣ, ಜಾಗತೀಕರಣ, ಕೈಗಾರಿಕರಣದ ಅಭಿವೃದ್ಧಿಯಿಂದ ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಏರ್ಪಡುತ್ತಿದ್ದು ಉದ್ಯೋಗ ಕ್ಷೇತ್ರವು ಮೊದಲ ಸ್ಥಾನದಲ್ಲಿದೆ. ಇಲ್ಲಿ ನಮ್ಮ ಕನಸಿನ ಹುದ್ದೆ ಪಡೆದುಕೊಳ್ಳಬೇಕೆಂದರೆ ನಿರ್ಧಿಷ್ಟವಾದ ನಡೆ ಮತ್ತು ವಿಭಿನ್ನ ಆಲೋಚನೆಗಳು ಅವಶ್ಯ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸೂಕ್ಷ್ಮ ಅದ್ಯಯನ ಅವಶ್ಯಕ. ಯಶಸ್ಸು ಒಂದು ದಿನದ ಕೊಡುಗೆಯಲ್ಲ‌ ನಿರಂತರ ಪ್ರಯತ್ನದ ಫಲವಾಗಿದೆ‌‌. ಕೆವಲ ಒಂದು ವಿಷಯದ ಆಯ್ಕೆಯಿಂದ ಜ್ಞಾನದ ಅಭಿವೃದ್ಧಿ ಸಾಧ್ಯವಿಲ್ಲ ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಎಲ್ಲ ವಿಷಯಗಳು ಒಂದಕ್ಕೊಂದು ಪೂರಕವಾಗಿದ್ದು ಎಲ್ಲವನ್ನು ವ್ಯವಸ್ಥಿತ ವಿಧಾನದಲ್ಲಿ ಅಭ್ಯಸಿಸುವ ಕಲೆ ರೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂವಿಧಾನವು ಕೇವಲ ಜ್ಞಾನಕ್ಕೆ ಸೀಮಿತವಾಗದೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಒಂದು ಶಕ್ತಿಯಾಗಿದೆ ಅದನ್ನು ಪ್ರತಿಯೊಬ್ಬ ಪ್ರಜೆಯು ತಿಳಿದುಕೊಳ್ಳಬೇಕು. ಇತಿಹಾಸವನ್ನು ಕಥೆಯ ಮಾದರಿಯಲ್ಲಿ ನೆನಪಿಟ್ಟು ಪರೀಕ್ಷೆಯಲ್ಲಿ ಪ್ರಮುಖ ಅಂಶಗಳನ್ನು ಸಾರಾಂಶ ರೂಪದಲ್ಲಿ ಬರೆಯುವ ಕಲೆ ಬೆಳಸಿಕೊಳ್ಳಬೇಕು. ಪ್ರಚಲಿತ ಘಟನೆಗಳನ್ನು ಓದುವುದು ಮತ್ತು ವರದಿ ಮಾಡಿಕೊಳ್ಳುವುದು, ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸುವುದು ಮತ್ತು ಮಾದರಿ ಪರೀಕ್ಷೆಗಳಲ್ಲಿ ಭಾಗವಹಿಸುವುದನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದರು.

ಬಿವಿವಿ ಸಂಘದ ಸದಸ್ಯ ಎಸ್.ಆರ್ ಮನಹಳ್ಳಿ ಮಾತನಾಡಿ ಶಿಕ್ಷಣ ಎನ್ನುವುದು ಭವಿಷ್ಯವನ್ನು ರೂಪಿಸುವ ಸೂತ್ರವಾಗಿದ್ದು ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಮಾಡುವುದರ ಮೂಲಕ ಗುರಿಮುಟ್ಟುವ ಛಲವನ್ನು ಇಟ್ಟುಕೊಳ್ಳಬೇಕು. ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಆಲೋಚನೆ, ಯೋಜನೆ ಮತ್ತು ಅನುಷ್ಠಾನ ಮಾಡುವ ಕೌಶಲ್ಯಗಳನ್ನು ಬೆಳಸಿಕೊಳ್ಳಿ ಎಂದರು


ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಶೈಕ್ಷಣಿಕ ಕೊಠಡಿಯಲ್ಲಿ ಪಟ್ಟ ಪರಿಶ್ರಮದಿಂದ ಉದ್ಯೋಗ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯ. ನಿರಂತರ ಅಧ್ಯಯನ‌ ಮಾಡಿದರೆ ಯಶಸ್ಸು ತಮ್ಮನ್ನು ಹುಡುಕಿಕೊಂಡು ಬರುತ್ತದೆ ವಿದ್ಯಾರ್ಥಿ ಜೀವನದಲ್ಲಿ ಕಠಿಣ ಅದ್ಯಯನದಲ್ಲಿ ತೊಡಗಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗುಣರಾಣಿ ಡಿಎಮ್, ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಕನ್ನಡ ಪ್ರಾದ್ಯಾಪಕ ಬಾಗೇಶ ಮುರಳಿ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಪ್ರಾದ್ಯಾಪಕರುಗಳಾದ ಎಸ್.ಡಿ ಕೆಂಗಲಗುತ್ತಿ, ಎಸ್.ವಿ ಕಟ್ಟಿ, ಎಮ್.ಎಸ್ ಬನ್ನಿ ಸೇರಿದಂತೆ ವಿವಿಧ ಮಹಾವಿದ್ಯಾಲಯದ ಪ್ರಾದ್ಯಾಪಕರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related News

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...

ನಿಮ್ಮ ಆಸ್ತಿಗಳ ಮೌಲ್ಯಗಳನ್ನು ಅಪಮೌಲ್ಯ ಮಾಡಬೇಡಿ ನೈಜ್ಯ ಬೆಲೆಗೆ ವ್ಯವಹಾರ ಮಾಡಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ. ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -