spot_img
spot_img
spot_img
spot_img
spot_img
30.1 C
Belagavi
Sunday, December 3, 2023
spot_img

ಮನಸ್ಸು ಸ್ವಚ್ಛ ಇದ್ದರೆ ಎಲ್ಲವೂ ಒಳ್ಳೆಯದೆ ಆಗುತ್ತದೆ – ವಿದ್ಯಾಶಂಕರ

“ಸ್ವಚ್ಛ ಹೀ ಸೇವಾ” ಶೀರ್ಷಿಕೆ ಅಡಿಯಲ್ಲಿ ಏಕ್ ತಾರೀಖ ಏಕ್ ಘಂಟಾ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆ ಮತ್ತು ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳು ಪ್ರೋಫೇಸರ್ ವಿಧ್ಯಾಶಂಕರರವರು ಕಸ ತೆಗೆಯುವುದರೊಂದಿಗೆ ಚಾಲನೆ ನೀಡಿದರು. ಇವರು ಸಂತಿಬಸ್ತವಾಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಏಕ ತಾರೀಖ ಏಕ ಘಂಟಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದಲ್ಲಿ ಎಲ್ಲಡೆಯೂ ಸರಕಾರಿ ಶಾಲೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಸ್ಥಳಗಳು ಮುಂತಾದವುಗಳನ್ನು ಈ ದಿನದಂದು ಒಂದು ಘಂಟೆಯ ಕಾಲ ಶ್ರಮದಾನ ಮಾಡುವುದರೊಂದಿಗೆ ಸ್ವಚ್ಛ ಮಾಡುತ್ತಿದ್ದಾರೆ.

ಸ್ವಚ್ಛತೆಯ ದಿನದಂದು ಎಲ್ಲರೂ ಒಂದು ವಿಷಯವನ್ನು ನೆನಪಿಡಬೇಕು. ಮನಸ್ಸು ಸ್ವಚ್ಛ ಇದ್ದರೆ ಎಲ್ಲವೂ ಒಳ್ಳೆಯದು ಆಗುತ್ತದೆ. ಆದ್ದರಿಃದ ಎಲ್ಲರೂ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಇಟ್ಟುಕೊಳ್ಳುವುದರ ಜೊತೆಗೆ ನಮ್ಮ ಮನಸ್ಸನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಲಕ್ಷ್ಮೀ ಪ. ಚನ್ನಿಕುಪ್ಪಿ , ಶ್ರೀ ವಾಯ್ ಎಸ್ ದೀಕ್ಷಿತ ಸ್ಥಾನಿಕ ಅಭಿಯಂತರರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಡಾ. ಪಿ.ವಿ. ಕಡದಕೈ ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಪ್ರೊಫೇಸರ್ ಹರೀಶ ಬೆಂಡಿಗೇರಿ ವಯಕ್ತಿಕ ಕಾರ್ಯದರ್ಶಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಶ್ರೀಮತಿ ವಿಮಲಾ ಪೂಜೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಂತಿಬಸ್ತವಾಡ, ಮಲ್ಪೂರಿ ಕ‌. ಜಿಡ್ಡಿಮನಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸಂತಿಬಸ್ತವಾಡ, ಗ್ರಾಮ ಪಂಚಾಯತ್ ಸದಸ್ಯರು ಭರ್ಮಾ ದು. ಗುಡುಂಕೇರಿ, ವಿಠ್ಠಲ ರಾ. ಅಂಕರಗಿ, ಪುಷ್ಪಾ ಕಾಂಬಳೆ, ಸುವರ್ಣಾ ಅ. ಅಂಕಲಗಿ, ಮಲ್ಪೂರಿ ರಾ. ವನ್ನೂರ, ಮಹಾದೇವಿ ಬಾ. ನಾಯಕ, ಬಸಪ್ಪಾ ಬೀರಮುತ್ತಿ, ರೇಣುಕಾ ಖಾನಾಪುರಿ, ನಿಶಾ ಜಂಗಳಿ, ಗ್ರಾಮ ಪಂಚಾಯತ್ ಕಾರ್ದರ್ಶೀ ಪೂರ್ಣಿಮಾ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತರು ಉಪಸ್ಥಿತರಿದ್ದರು. ಸಂತಿಬಸ್ತವಾಡ ಗ್ರಾಮ ಪಂಚಾಯತ್ ಎದುರುಗಡೆ, ಮರಾಠಿ ಸರಕಾರಿ ಪ್ರಾಥಮಿಕ ಶಾಲೆ, ಅಂಗಸವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಕಸವನ್ನು ತೆಗೆದು ಸ್ವಚ್ಛತೆಯನ್ನು ಮಾಡಲಾಯಿತು.

Related News

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ -ಜಮೀರ್ ಅಹ್ಮದ್ ಖಾನ್

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು -ಎಂ.ಬಿ.ಪಾಟೀಲ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....

Latest News

- Advertisement -
- Advertisement -
- Advertisement -
- Advertisement -