ಹಾವೇರಿ: ಸಿಎಂ ಸಿದ್ದರಾಮಯ್ಯರಿಗೆ (Siddaramaiah) ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಲೋಕಾಯುಕ್ತ ವಿಚಾರಣೆ ಎದುರಿಸಲಿ ಎಂದು ಹಾವೇರಿ (Haveri) ಶಿಗ್ಗಾಂವಿ (Shiggaon) ಮತಕ್ಷೇತ್ರ ಹುಲುಗೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ( B Sriramulu) ಹೇಳಿದ್ದಾರೆ.
ಸಿಎಂಗೆ ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಲೋಕಾಯುಕ್ತ ವಿಚಾರಣೆ ಎದುರಿಸಲಿ. ಲೋಕಾಯುಕ್ತ ಸಿಎಂ ಆಡಳಿತ ವ್ಯಾಪ್ತಿಗೆ ಬರುತ್ತದೆ. ಅವರ ಕೈ ಕೆಳಗಿನ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಬೇಕು. ಹೀಗಾಗಿ ನ್ಯಾಯಯುತವಾದ ತನಿಖೆ ಆಗುವ ನಂಬಿಕೆಯಿಲ್ಲ. ಆ ಕಾರಣದಿಂದ ಸಿಬಿಐಗೆ ವಿಚಾರಣೆ ನೀಡಲು ಬಿಜೆಪಿ ಒತ್ತಾಯ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಭಯದಿಂದ ತಮ್ಮ ಯಾವುದೇ ಹಗರಣಗಳನ್ನು ಸಿಬಿಐಗೆ ನೀಡುತ್ತಿಲ್ಲ. ಸಿಬಿಐ ರಾಜ್ಯ ಪ್ರವೇಶಕ್ಕೆ ಬಿಡುತ್ತಿಲ್ಲ ಎಂದರು.