ಬೆಂಗಳೂರು: 4 ಜನರು ಹೇಳಿದಂತೆ ಸಚಿವರಿಗೆ ಗೌರವ ಕೊಟ್ಟು ನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಅದೇ ನೈತಿಕತೆಯಲ್ಲಿ ಸಿದ್ದರಾಮಯ್ಯ (Siddaramaiah) ರಾಜೀನಾಮೆಯನ್ನ 4 ಜನ ಮಂತ್ರಿಗಳು ಪಡೆಯಲಿ. ಅಥವಾ ಪರಮೇಶ್ವರ್ (G Parameshwara) ಬಿಟ್ಟು ಉಳಿದ 3 ಜನ ಸಚಿವರು ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಮೇಲಿನ ಪ್ರೀತಿ ಅನಾವರಣ ಮಾಡಲಿ ಅಂತ ವಿಪಕ್ಷ ನಾಯಕ ಆರ್.ಅಶೋಕ್ (R Ashoka) 4 ಜನ ಸಚಿವರಿಗೆ ಸವಾಲ್ ಹಾಕಿದ್ದಾರೆ.
ನಿನ್ನೆ ಅಶೋಕ್ ವಿರುದ್ಧ ಭೂ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದ 4 ಜನ ಸಚಿವರಿಗೆ ತಿರುಗೇಟು ಕೊಟ್ಟ ಅಶೋಕ್, ಸಚಿವರಿಗೆ ನಾನು ಕೊಟ್ಟಿರೋ ಸವಾಲನ್ನ 24 ಗಂಟೆ ಒಳಗೆ ಸ್ವೀಕಾರ ಮಾಡಲಿ ಅಂತ ಸವಾಲ್ ಹಾಕಿದ್ರು. ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ (Highcourt) ನನ್ನ ಪರ ತೀರ್ಪು ಕೊಟ್ಟಿದೆ. ಸಿದ್ದರಾಮಯ್ಯ ರೀತಿ ತನಿಖೆಗೆ ಆದೇಶ ಮಾಡಿಲ್ಲ. ಹೀಗಿದ್ರೂ ದ್ವೇಷದ ರಾಜಕೀಯಕ್ಕಾಗಿ ನನ್ನ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.
ಅದು ಬಿಡಿಎ ಜಾಗ ಅಲ್ಲ. ಬಿಡಿಎ ಈ ಸಂಬಂಧ ನನಗೆ NOC ಕೊಟ್ಟಿದೆ. ಮಾಲೀಕರ ರಾಮಸ್ವಾಮಿಗೆ ಅವರ ತಂದೆಯಿಂದ ಜಮೀನು ಬಂದಿದೆ. ನಿಯಮದ ಪ್ರಕಾರವೇ ನಾನು ಹಣ ಬಿಟ್ಟು ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ. 2 ಕೋರ್ಟ್ ನನ್ನ ಪರ ತೀರ್ಪು ಕೊಟ್ಟಿದೆ. ಅಲ್ಲದೇ 2010 ರಲ್ಲಿ ಅಂದಿನ ರಾಜ್ಯಪಾಲರು ಹಂಸರಾಜ್ ಭಾರದ್ವಾಜ್ ಅವರ ಮುಂದೆ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಮನವಿ ಮಾಡಿದ್ರು. ಆದರೆ ಕಾಂಗ್ರೆಸ್ ನಿಂದ ನೇಮಕವಾದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲಿಲ್ಲ ಅಂತ ಸಚಿವರಿಗೆ ತಿರುಗೇಟು ನೀಡಿದ್ರು.
ನನ್ನ ಕೇಸ್ ಬೇರೆ ಸಿದ್ದರಾಮಯ್ಯ ಕೇಸ್ ಬೇರೆ. ಆದರೂ ನಾನು ಸಚಿವರ ಮಾತಿಗೆ ಒಪ್ಪಿ ನೈತಿಕತೆ ಹೊತ್ತು ರಾಜೀನಾಮೆ ಕೊಡುತ್ತೇನೆ. ಇದರಂತೆ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಸಚಿವರು ಪಡೆಯಬೇಕು. ಇಲ್ಲದೇ ಹೋದರೆ ಸಿಎಂ ಪರವಾಗಿ 3 ಜನ ಸಚಿವರಾದ್ರು ರಾಜೀನಾಮೆ ಕೊಡಲಿ ಅಂತ ಸವಾಲ್ ಹಾಕಿದ್ರು.