ಕಾಂಗ್ರೆಸ್ ಪಕ್ಷಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ್ದೇನೆ 2023ರ ಚುನಾವಣೆಯ ನಾನು ಕೂಡ ಟಿಕೆಟ್ ಆಕಾಂಕ್ಷಿ , ಪಕ್ಷ ಮತ್ತು ಹೈ ಕಮಾಂಡ್ ಸಣ್ಣ ಕಾರ್ಯಕರ್ತರನ್ನು ಗುರುತಿಸಿ ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ನನಗೊಂದು ಅವಕಾಶ ಮಾಡಿಕೊಡಬೇಕೆಂದು ಬೆಳಗಾವಿ ಕಾಂಗ್ರೆಸ್ ಜಿಲ್ಲಾ ಕಿಸಾನ್ ಮೋರ್ಚಾ ಅಧ್ಯಕ್ಷೆ ಶಬಾನ ಪಾರ್ತಹಳ್ಳಿ ಹೇಳಿದ್ದಾರೆ
ಬುದುವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ರಾಜಕೀಯ ಗುರು ಸತೀಶ್ ಜಾರಕಿಹೊಳಿ ಅವರ ಆಶೀರ್ವಾದದಿಂದ ನಾನು ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸತೀಶ್ ಜಾರಕಿಹೊಳಿ ಅವರು ಪಕ್ಷದಲ್ಲಿ ನನಗೆಲ್ಲಾ ಅವಕಾಶಗಳನ್ನು ನೀಡಿದ್ದಾರೆ ಪಕ್ಷಕ್ಕಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ನನ್ನ ಕಾರ್ಯವನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಬೆಳಗಾವಿಯ ಯಾವುದೇ ಕ್ಷೇತ್ರಗಳಲ್ಲಿ ನನಗೆ ಅಭ್ಯರ್ಥಿಯಾಗಿ ಪಕ್ಷ ಟಿಕೆಟ್ ನೀಡಬೇಕು.
ನಾನು ಒಬ್ಬ ಮುಸ್ಲಿಂ ಮಹಿಳೆ ಇರುವುದರಿಂದ ಬೆಳಗಾವಿ ಉತ್ತರ ಅಥವಾ ದಕ್ಷಿಣ ಕ್ಷೇತ್ರ ಯಾವುದಾದರು ಒಂದು ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ಮಾಧ್ಯಮದ ಮೂಲಕ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡರು.
ವರದಿ: ರತ್ನಾಕರ ಗೌಂಡಿ
ಬೆಳಗಾವಿ