Ad imageAd image

ನಾನು, ರಮೇಶ್‌ ಜಾರಕಿಹೊಳಿ ಯಾರಿಗೂ ಬಗ್ಗಲ್ಲ

ratnakar
ನಾನು, ರಮೇಶ್‌ ಜಾರಕಿಹೊಳಿ ಯಾರಿಗೂ ಬಗ್ಗಲ್ಲ
WhatsApp Group Join Now
Telegram Group Join Now

ಬೆಳಗಾವಿ: ಯಾರನ್ನೋ ಅಧ್ಯಕ್ಷ, ಸಿಎಂ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ನಾನು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮಾಡಿದೆ. ಇನ್ನಿಲ್ಲದ ಚಿತ್ರ ಹಿಂಸೆಯನ್ನು ನನಗೆ ನೀಡುತ್ತಿದ್ದಾರೆ. ದಲಿತರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಿದ್ದೇನೆ. ಮಂತ್ರಿಗಿರಿಯಾಗಿ ನಾನು ಯಾರು ಬಳಿ ಹೋಗಿಲ್ಲ. ನನ್ನ, ರಮೇಶ್ ಜಾರಕಿಹೊಳಿ ಬ್ಲ್ಯಾಕ್ ಮೆಲ್ ಮಾಡಿದ್ರು ಬಗ್ಗಿಲ್ಲ. ನಾನು, ರಮೇಶ್ ಜಾರಕಿಹೊಳಿ ಯಾರಿಗೂ ಬಗ್ಗಲ್ಲ ಎಂದು ಹೇಳಿದರು.

ಇದು ರಮೇಶ್‌ ಜಾರಕಿಹೊಳಿ ತಾಕತ್ತಿನ ಟ್ರೈಲರ್. ದಾವಣಗೆರೆಯಲ್ಲಿ ಪಿಚ್ಚರ್ ಅಭಿ ಬಾಕಿ ಹೈ. ನಾವೆಲ್ಲ ವೇದಿಕೆಯಲ್ಲಿ ಕುಳಿತವರು ಮೂರು, ನಾಲ್ಕು ಐದು ಸಲ ಶಾಸಕರಾದವರು. ನಮ್ಮಲ್ಲಿ ಹಾಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯಾರನ್ನು ಸಿಎಂ, ರಾಜ್ಯಾದ್ಯಕ್ಷ ಮಾಡಲು ನಾವು ಇಲ್ಲಿ ಸೇರಿಲ್ಲ. ರೈತರ ಭೂಮಿ ಉಳಿಸಲು ಹೋರಾಟ ಮಾಡಲು ಸೇರಿದ್ದೇವೆ‌. ಕರ್ನಾಟಕವನ್ನು ರಾಮರಾಜ್ಯ ಮಾಡಲು ನಾವು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article