ಪಿಎಸ್‌ಐ, ಕೆಸೆಟ್, ವಿಎಒ, ಜಿಟಿಟಿಸಿಯ ಹಲವು ಹುದ್ದೆಗೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ (ಕೆಇಎ) ರಿಲೀಸ್ ಮಾಡಿದೆ. ಫೆಬ್ರುವರಿಯಿಂದ ಅಧಿಸೂಚನೆ ಹೊರಡಿಸಲಾದ ಹುದ್ದೆಗಳಿಗೆ ವೇಳಾಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್, ಕಾಲೇಜು ಶಿಕ್ಷಣ ಇಲಾಖೆ ಕೆಸೆಟ್ ಪರೀಕ್ಷೆ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಜಾಬ್ಗಳಿಗೆ ಅಧಿಸೂಚಿಸಿದ ಹುದ್ದೆಗಳಿಗೆ ವೇಳಾಪಟ್ಟಿ ಬಿಡುಗಡೆಯಾಗಿದೆ.
ಪಿಎಸ್‌ಐ ಹುದ್ದೆಗಳಿಗೆ ವೇಳಾಪಟ್ಟಿ;
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 402 ಹುದ್ದೆಗಳಿಗೆ ಪರೀಕ್ಷೆ ಅಕ್ಟೋಬರ್ 03, 2024
ಪೇಪರ್-1- ಬೆಳಗ್ಗೆ 10:30 ರಿಂದ 12 ಮಧ್ಯಹ್ನಾ ಗಂಟೆ
ಪೇಪರ್-2- 12:30 ರಿಂದ ಮಧ್ಯಾಹ್ನ 2:00 ಗಂಟೆ
ಕಾಲೇಜು ಶಿಕ್ಷಣ ಇಲಾಖೆ ಎಕ್ಸಾಂ ಯಾವಾಗ..?
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಹುದ್ದೆ ಅರ್ಹತಾ ಪರೀಕ್ಷೆ- ಕೆಸೆಟ್
ಪೇಪರ್-1 ಹಾಗೂ ಪೇಪರ್-2 ಈ ಎರಡನ್ನೂ 24 ನವೆಂಬರ್ 2024 ರಂದು ನಡೆಸಲಾಗುತ್ತದೆ.
ರಾಯಚೂರು ವಿವಿಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು
24 ನವೆಂಬರ್ 2024
ಪತ್ರಿಕೆ-1- 3 ಗಂಟೆಯಿಂದ 4 ಗಂಟೆವರೆಗೆ
ಪತ್ರಿಕೆ-2- 11 ಗಂಟೆ ಟು 1 ಗಂಟೆವರೆಗೆ ಇರುತ್ತದೆ
ರೆವಿನ್ಯೂ ಡಿಪಾರ್ಟ್ಮೆಂಟ್ ವಿಎಒ ಹುದ್ದೆಗಳು
ಒಂದು ಸಾವಿರ ಗ್ರಾಮಾಡಳಿತಾಧಿಕಾರಿ ಹಾಗೂ ಜಿಟಿಟಿಸಿಯ ಹುದ್ದೆಗಳಿಗೆ ಕನ್ನಡ ಭಾಷೆ ಎಕ್ಸಾಂ ಸೆಪ್ಟೆಂಬರ್ ಇದೇ 29 ರಂದು, ಅಕ್ಟೋಬರ್ 26 ರಂದು ಎಕ್ಸಾಂ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ಪೇಲ್ ಆದವರಿಗೆ ಅವಕಾಶ ಇರಲ್ಲ
ಅಕ್ಟೋಬರ್ 26 ರಂದು ಮಧ್ಯಾಹ್ನ 2:30ರ ನಂತರ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯನ್ನು ವಯೋಮಿತಿ ಸಡಿಲಿಕೆಯಿಂದ ಹೊಸ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನಡೆಸಲಾಗುತ್ತದೆ.
ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು;
ಅಕ್ಟೋಬರ್ 27 ರಂದು ಪರೀಕ್ಷೆ ನಡೆಯುತ್ತದೆ.
ಪೇಪರ್-1- ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ
ಪೇಪರ್-2- ಮಧ್ಯಾಹ್ನ 2:30 ರಿಂದ 4: 30ರವರೆಗೆ ಇರುತ್ತೆ.