ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಟ್ರಸ್ಟ್ ಹತ್ತಾರು ವರ್ಷಗಳಿಂದ ಅಂಧ ಮಕ್ಕಳ ಭವಿಷ್ಯ ರೂಪಿಸುತ್ತಿದೆ.ಅಂಧರ ಜೀವ ಬೆಳಕು ಅಂಧರ ಶಾಲೆಯಲ್ಲಿ ವಾರ್ಷಿಕವಾಗಿ 30 ಜನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ 5 ಜನ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗೆ ಧನ ಸಹಾಯದ ಅವಶ್ಯಕತೆ ಇದ್ದು ದಾನಿಗಳ ಸಹಾಯದ ನಿರೀಕ್ಷೆ ಯಲ್ಲಿದೆ ಅಂಧರ ಜೀವ ಬೆಳಕು ಸಂಸ್ಥೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕವಾಗಿ ಇಪ್ಪತ್ತು ಸಾವಿರ ಶೈಕ್ಷಣಿಕ ವೆಚ್ಚ ಖರ್ಚಾಗುತ್ತಿದ್ದು ಸಹೃದಯಿ ದಾನಿಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡಬೇಕೆಂದು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ನಾಗನಗೌಡ ಬೆಳ್ಳೂಳ್ಳಿ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ-+91 95359 51112