Ad imageAd image
- Advertisement - 

ಬೆಳಗಾವಿ ಮಹಾನಗರ ಪಾಲಿಕೆಯಿಂದ ಡಿಜಿಟಲ್ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಠರಾವು ಪಾಸ್

ratnakar
ಬೆಳಗಾವಿ ಮಹಾನಗರ ಪಾಲಿಕೆಯಿಂದ ಡಿಜಿಟಲ್ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಠರಾವು ಪಾಸ್
WhatsApp Group Join Now
Telegram Group Join Now

ಬೆಳಗಾವಿ, 10 ಅಕ್ಟೋಬರ್ 2024: ಡಿಜಿಟಲ್ ಮಾಧ್ಯಮಗಳು ಇಂದು ಸಮಾಜಕ್ಕೆ ತ್ವರಿತವಾಗಿ ಮತ್ತು ನಿಖರವಾಗಿ ಮಾಹಿತಿ ನೀಡುತ್ತಿರುವ ಪ್ರಮುಖ ಮಾಧ್ಯಮಗಳಾಗಿದ್ದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಪತ್ರಕರ್ತರು ತಮ್ಮ ದೈನಂದಿನ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಕಳೆದ ಕೆಲ ವರ್ಷಗಳಿಂದ ತಮ್ಮ ಸದಸ್ಯರ ಹಕ್ಕುಗಳನ್ನು ಬಲಪಡಿಸಲು ಹೋರಾಟ ನಡೆಸುತ್ತಾ ಬಂದಿದೆ.

ಈ ಹೋರಾಟದ ಫಲವಾಗಿ, ಇಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಸವಿತಾ ಕಾಂಬ್ಳೆ ಅವರ ಅಧ್ಯಕ್ಷತೆಯಲ್ಲಿ, ಡಿಜಿಟಲ್ ಸುದ್ದಿಗಾರರಿಗೆ ಆರೋಗ್ಯ ಕಾರ್ಡ್ ನೀಡುವ ಮಹತ್ವದ ಠರಾವನ್ನು ಪಾಸ್ ಮಾಡಲಾಯಿತು.

ಆರೋಗ್ಯ ಕಾರ್ಡ್ ಠರಾವು: ಡಿಜಿಟಲ್ ಪತ್ರಕರ್ತರ ಹಕ್ಕುಗಳಿಗೆ ಬಲ

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ಡಿಜಿಟಲ್ ನ್ಯೂಸ್ ಅಸೋಸಿಯೇಷನ್, ಡಿಜಿಟಲ್ ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿತ್ತು. ಈ ಹೋರಾಟದ ಕಾರಣದಿಂದ, ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ಬಿಲ್ಲು ಮಂಡನೆಗೊಂಡಿತು ಮತ್ತು ಎಲ್ಲ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಬಿಲನ್ನು ಅಂಗೀಕರಿಸಲಾಯಿತು.

ಪಕ್ಷಗಳ ಒಮ್ಮತ: ಮಹತ್ವದ ತೀರ್ಮಾನಕ್ಕೆ ರಾಜಕೀಯ ಬೆಂಬಲ

ಈ ಬಿಲ್‌ ಮಂಡನೆಯಾಗುವಾಗ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರು ಅಭಯ ಪಾಟೀಲ್, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರು ರಾಜು ಸೇಟ್ ಮತ್ತು ಬಿಜೆಪಿ ಪಾಲಿಕೆ ಸದಸ್ಯರಾದ ಹನುಮಂತ್ ಕೊಂಗಾಳಿ ಸಹ ಭಾಗವಹಿಸಿದ್ದರು.

ಹನುಮಂತ್ ಕೊಂಗಾಳಿ ಅವರು ಈ ಬಿಲ್‌ ಅನ್ನು ಪ್ರಸ್ತಾಪಿಸಿದ್ದು,ಡಿಜಿಟಲ್ ಪತ್ರಕರ್ತರ ಹಕ್ಕುಗಳು ಮತ್ತು ಅವರ ಆರೋಗ್ಯದ ಭದ್ರತೆ ಸಮುದಾಯದ ಪ್ರಗತಿಗೆ ಅಗತ್ಯವಿದೆ,ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ಅಭಯ ಪಾಟೀಲ್ ಮತ್ತು ರಾಜು ಶೇಠ್ ಅವರು ಈ ಬಿಲಗೆ ಸಮ್ಮತಿ ಸಲ್ಲಿಸಿದರು,ಹನುಮಂತ್ ಕೊಂಗಾಳಿ ಅವರ ಪ್ರಸ್ತಾಪನೆಯನ್ನು ಪಾಲಿಕೆ ಸದಸ್ಯರು ಸಹಮತದಿಂದ ಬೆಂಬಲಿಸಿದರು.

ಮಹಾಪೌರರಿಂದ ಠರಾವು ಅಂಗೀಕಾರ

ಮಹಾನಗರ ಪಾಲಿಕೆಯ ಮಹಾಪೌರರಾದ ಸವಿತಾ ಕಾಂಬ್ಳೆ ಅವರು ಈ ಬಿಲ್ಲನ್ನು ಅಂಗೀಕರಿಸಿ, ಡಿಜಿಟಲ್ ಪತ್ರಕರ್ತರ ಹಕ್ಕುಗಳನ್ನು ಕಾಯ್ದುಕೊಳ್ಳಲು ಅಗತ್ಯವಾದ ಆರೋಗ್ಯ ಕಾರ್ಡ್ ಅನ್ನು ಒದಗಿಸಲು ಪರಿಪೂರ್ಣ ನಿರ್ಣಯ ಕೈಗೊಂಡರು.

ಪತ್ರಕರ್ತರ ಜೀವನಕ್ಕೆ ಬದಲಾವಣೆ

ಈ ಹೊಸ ನಿರ್ಣಯದಿಂದ ಡಿಜಿಟಲ್ ಪತ್ರಕರ್ತರು ತಮ್ಮ ಕಾರ್ಯವನ್ನು ನಿರ್ಭಯವಾಗಿ ಮುಂದುವರಿಸಬಹುದಾಗಿದೆ. ಇದರಿಂದಾಗಿ, ಆರೋಗ್ಯದ ಭದ್ರತೆ ಮತ್ತು ತುರ್ತು ಸಂದರ್ಭಗಳಲ್ಲಿ ಸೂಕ್ತ ವೈದ್ಯಕೀಯ ನೆರವು ಲಭ್ಯವಾಗುತ್ತದೆ.

ಅಸೋಸಿಯೇಷನವತಿಯಿಂದ ದನ್ಯವಾದ

ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಬೆಳಗಾವಿ ಮಹಾನಗರ ಪಾಲಿಕೆ, ಎಲ್ಲಾ ರಾಜಕೀಯ ಪಕ್ಷದ ನಾಯಕರಿಗೆ ಮತ್ತು ವಿಶೇಷವಾಗಿ ಮಹಾಪೌರ ಸವಿತಾ ಕಾಂಬ್ಳೆ ಅವರಿಗೆ ಈ ಮಹತ್ವದ ನಿರ್ಣಯಕ್ಕಾಗಿ ಹೃತ್ಪೂರ್ವಕ ಧನ್ಯತೆಗಳನ್ನು ಸಲ್ಲಿಸಿದೆ.

WhatsApp Group Join Now
Telegram Group Join Now
Share This Article