ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿಗಳ ಜಾರಿ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.
ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಇನ್ನೂ ಸಮಯವಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಯಾವುದೇ ಕಾರ್ಯಕ್ರಮಕ್ಕೆ ಹಣ ಒದಗಿಸುವುದು ಕಷ್ಟವಲ್ಲ. ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ತಲುಪುತ್ತದೆ ಎಂಬುದು ಮುಖ್ಯ. ಬಾಡಿಗೆದಾರರಿಗೆ ಅಗ್ರಿಮೆಂಟ್ ಪೇಪರ್ ಕೊಡಲ್ಲವೆಂದು ಹೇಳ್ತಿದ್ದಾರೆ. ವಿದ್ಯುತ್ ದರ ಏರಿಕೆಗೆ 2 ರಾಷ್ಟ್ರೀಯ ಪಕ್ಷಗಳು ಕಾರಣ. 2017-18ರಲ್ಲೇ ಮುಂದೆ ಆಗುವ ಅನಾಹುತ ಬಗ್ಗೆ ನಾನು ಹೇಳಿದ್ದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ JDS ಮೈತ್ರಿ ವಿಚಾರಕ್ಕೆ ಸಂಬಂಧಿಸಿ ರಾಜಕಾರಣದಲ್ಲಿ ಚರ್ಚೆ, ಊಹಾಪೋಹ ಹುಟ್ಟುವುದು ಸಹಜ. ಕೆಲವೊಮ್ಮೆ ಗಾಳಿ ಸುದ್ದಿಗಾಗಿ ಚರ್ಚೆ ಮಾಡ್ತಾರೆ ಇದಕ್ಕೆಲ್ಲ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಉತ್ತರ ಸಿಗಲಿದೆ. ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ನನ್ನ ಮುಂದೆ ಚರ್ಚೆ ಆಗಿಲ್ಲ. ಸದ್ಯಕ್ಕೆ ಜಿಲ್ಲಾವಾರು ಜೆಡಿಎಸ್ ಮುಖಂಡರ ಸಭೆ ಮಾಡಿದ್ದೇನೆ. ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆ. ಏನು ಮಾಡಬೇಕೆಂದು ಆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ನನಗೆ ರಾಜಕಾಣವೇ ಒಲವಿಲ್ಲ, ಕಾರ್ಯಕರ್ತರಿಗಾಗಿ ಇದ್ದೇನೆ. ಸಿಎಂ ಸ್ಥಾನದಿಂದ ಕೆಳಗಿಳಿದಾಗಲೇ ತೀರ್ಮಾನ ಮಾಡಬೇಕೆಂದಿದ್ದೆ. ಸಿಎಂ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ತೇವೆ ಎಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.