ಬೆಂಗಳೂರು: ಮಹಾತ್ಮ ಗಾಂಧಿ ಹೆಸರಿನಲ್ಲಿ ಮಾಡುತ್ತಿರುವ ಬೆಳಗಾವಿ ಸಮಾವೇಶದಲ್ಲಿ ಆಧುನಿಕ ಗಾಂಧಿಗಳ ಕಟೌಟ್ಗಳೇ ರಾರಾಜಿಸುತ್ತಿವೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ವಿಷಯಗಳು ಗೊತ್ತಿಲ್ಲ. ಇವತ್ತು ಗಾಂಧೀಜಿಯವರ ಶತಮಾನೋತ್ಸವ ಶತಮಾನೋತ್ಸವದ ಕಾರ್ಯಕ್ರಮ ಅದ್ದೂರಿಯಾಗಿ ನಡೀತಾ ಇದೆ. ಬೆಳಗಾವಿಯಲ್ಲಿ ಗಾಂಧೀಜಿಯವರ ಹೆಸರಿನಲ್ಲಿ ಏನೋ ಒಂದು ವರ್ಷದ ಕಾರ್ಯಕ್ರಮ ಬೇರೆ ಮಾಡುತ್ತಂತೆ ಸರ್ಕಾರ. ಗಾಂಧೀಜಿಯವರ ಸ್ಮರಣೆಯಲ್ಲಿ ಕಾರ್ಯಕ್ರಮ, ಆದರೆ ಅಲ್ಲಿ ಹಾಕಿರುವ ಕಟೌಟ್ಗಳೆಲ್ಲ ಈಗಿನ ಗಾಂಧಿಗಳದ್ದು ಎಂದರು.