spot_img
spot_img
spot_img
28.1 C
Belagavi
Thursday, September 29, 2022
spot_img

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ರೂ. 15.00 ಲಕ್ಷಗಳ ವೈಧ್ಯಕೀಯ ಉಪಕರಣಗಳ ಹಸ್ತಾಂತರ

spot_img

ಬೆಳಗಾವಿ: ಶ್ರೀ ವಿರೇಶ ಕಿವಡಸನ್ನವರ ರವರು ಸಮರ್ಥನಮ ಟ್ರಸ್ಟ್ ವತಿಯಿಂದ ಹಾಗೂ ಹೆಚ್.ಎಸ್.ಬಿ.ಸಿ ಇಲೆಕ್ಟ್ರಾನಿಕ್ಸ್ ಡಾಟಾ ಪ್ರೋಸೆಸಿಂಗ್ ಇಂಡಿಯಾ ಪ್ರೈ.ಲಿ. ಇವರ ಸಹಕಾರದೊಂದಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ವಂಟಮೂರಿ ಕಾಲೋನಿಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಂದಾಜು ರೂ. 15.00 ಲಕ್ಷಗಳ ವೈಧ್ಯಕೀಯ ಉಪಕರಣಗಳನ್ನು ಶಾಸಕ ಅನಿಲ ಬೆನಕೆರವರ ನೇತೃತ್ವದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಉದ್ಯಮಿಗಳಾದ ವಿರೇಶ ಕಿವಡಸನ್ನವರವರು ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ. ಕೋರೋನಾ ಮಹಾಮಾರಿಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ 15.00 ಕೋಟಿಗಳಷ್ಟು ದೇಣಿಗೆ ಹಾಗೂ 6 ಲಕ್ಷ ದಿವ್ಯಾಂಗರಿಗೆ ಅವರ ಸಂಪೂರ್ಣ ಏಳ್ಗೆಗೆ ಶ್ರಮಿಸಿದ್ದಾರೆ ಎಂದರು.

ಅದರಂತೆಯೆ ಇಂದು ವಂಟಮೂರಿ ಕಾಲೋನಿಯಲ್ಲಿನ ಹೊಸದಾಗಿ ನಿರ್ಮಾಣವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ರೂ. 15.00 ಲಕ್ಷಗಳಲ್ಲಿ 2 ಮಲ್ಟಿ ಪ್ಯಾರಾ ಮಾನಿಟರ್, 1 ಅಲ್ಟ್ರಾ ಸೌಂಡ್ ಮಷಿನ ಇಸಿಜಿ ವಿತ್ ಇಕೋ, 1 ವೆಂಟಿಲೇಟರ್, 2 ಫಲ್ಸ್ ಆಕ್ಸಿಮೀಟರ್, 2 ಆಯ್.ಸಿ.ಯು ಬೆಡ್, 1 ಹೆಚ.ಎಫ.ಎನ್.ಸಿ, 1 ಬಿ.ಆಯ್.ಪಿ.ಎ.ಪಿ, 2000 ಎನ್ 95 ಮಾಸ್ಕ್, 1000 3-ಪ್ಲೈ ಮಾಸ್ಕ್, 50 ಲೀಟರ್ ಸ್ಯಾನಿಟೈಜರ್, 10 ಸ್ಯಾನಿಟೈಜರ ಸ್ಟ್ಯಾಂಡ್, 50 ಲೀಟರ್ ಹಾಂಡ್ ವಾಶ್, 50 ಲೀಟರ್ ಜಂತುಹುಳು ನಿವಾರಕ ಔಷಧಿ, 25 ಪ್ಯಾಕೇಟ್ ಗ್ಲೌಸಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದರು.

ಉಪಕರಣಗಳನ್ನು ಇಲ್ಲಿನ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದ ಅವರು ವೈಧ್ಯಕೀಯ ಉಪಕರಣಗಳನ್ನು ನೀಡಿರುವ ವಿರೇಶ ಕಿವಡಸನ್ನವರ, ಸಮರ್ಥನಮ ಟ್ರಸ್ಟ್ ಹಾಗೂ ಹೆಚ್.ಎಸ್.ಬಿ.ಸಿ ಇಲೆಕ್ಟ್ರಾನಿಕ್ಸ್ ಡಾಟಾ ಪ್ರೋಸೆಸಿಂಗ್ ಇಂಡಿಯಾ ಪ್ರೈ.ಲಿ. ಇವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

spot_img

Related News

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -