ಬೆಳಗಾವಿ: ನಿರಂತರ ಕ್ರಿಯಾಶೀಲತೆಯಿಂದ ನಿಸ್ವಾರ್ಥವಾಗಿ ಜನ ಸೇವೆಯೆ ಈಶ ಸೇವೆ ಎಂದು ತಿಳಿದು ಕಾರ್ಯಮಾಡಿದರೆ ಸಂಘ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯತ್ತವೆ ಎಂದು ಕಾರಂಜಿ ಮಠದ ಪೂಜ್ಯ ಗುರಸಿದ್ದ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಸಮೀಪದ ಮಾರಿಹಾಳ ಗ್ರಾಮದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಿಂದ ಶನಿವಾರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಸಹಕಾರ ಸಂಘಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಾಳಜಿ ಹೊಂದಬೇಕು. ಈ ನಿಟ್ಟನಲ್ಲಿ ಗ್ರಾಮೀಣ ಪ್ರದೇಶದ ಬಡರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧ ದೊರೆಯುವಂತೆ ಮಾಡಿರುವದು ಶ್ಲಾಘನೀಯ ಎಂದರು.
ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಮಾತನಾಡಿ, ಸಪ್ತ ತತ್ವಗಳ ಅಡಿಯಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗಳು ಜನಸಾಮನ್ಯರ ಹುಡಿಕೆ ಮಾಡುವ ಹಣಕ್ಕೆ ಬಡ್ಡಿ ಮತ್ತು ರಕ್ಷಣೆ ನೀಡುವದರೊಂದಿಗೆ ಅವಶ್ಯಕತೆ ಇರುವವರಿಗೆ ಅವರ ಬೇಡಿಕೆ ಈಡೆರಿಸಲು ತ್ವರಿತಗತಿಯಲ್ಲಿ ಶೂನ್ಯ ಬಡ್ಡಿ ಬೆಳೆಸಾಲ ಕಡಿಮೆ ಬಡ್ಡಿದರದಲ್ಲಿ ಇತರೆ ಸಾಲ ನೀಡಿ ಸಮಾಜದಲ್ಲಿ ಪ್ರತಿಯೊಬ್ಬರ ಏಳಿಗೆಗೆ ಸಹಕಾರಿ ತತ್ವದಡಿ ನಡೆಯುವ ಸಹಕಾರಿ ಬ್ಯಾಂಕ್ ಗಳ ಕಾರ್ಯನಿರ್ವಹಿಸಿತ್ತಿದೆ. ಕೇಂದ್ರ ಸರ್ಕಾರ ಸಹಕಾರಿ ಸಂಘಗಳ ಅಭಿವೃದ್ಧಿಗೆ ಅನೇಕ ಸೌಲತ್ತುಗಳನ್ನು ನಿಡುತಿದ್ದು ಬರುವ ದಿನಗಳಲ್ಲಿ ಪೆಟ್ರೋಲ್ ಬಂಕ್ ಹಾಗೂ ಅಡುಗೆ ಗ್ಯಾಸ್ ವಿತರಣೆ ಪ್ರಾರಂಭ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಹಿರಿಯ ನಿರ್ದೇಶಕರಾದ ವಿರಭದ್ರಪ್ಪ ಮಾದಮ್ಮನವರ ಮಾತನಾಡಿ, ಸಹಕಾರಿ ಸಂಸ್ಥೆಗಳ ಬಂಡವಾಳಕ್ಕೆ ಕೈ ಜೋಡಿಸುವ ಸದಸ್ಯರು, ಸಮಾನವಾಗಿ ಹೂಡಿಕೆ ಮಾಡುವುದಲ್ಲದೆ, ಅದರ ಹೊಣೆಗಾರಿಕೆಯನ್ನು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸಮಾನವಾಗಿ ನಿರ್ವಹಿಸುತ್ತಾರೆ. ಆರ್ಥಿಕ ಚಟುವಟಿಕೆಗಳ ಮೇಲೆ ಬರುವ ಹೆಚ್ಚುವರಿ ಲಾಭಾಂಶವು ಸಹಕಾರಿ ಸಂಸ್ಥೆಗಳ ಒಡೆತನಕ್ಕೆ ಸೇರಿದರು ಡಿವಿಡೆಂಟ್ ಆದಾರದ ಮೇಲೆ ಸದಸ್ಯರ ಶೇರ ಹಣದ ಮೇಲೆ ನೀಡಬೇಕು. ಸ್ವ ಇಚ್ಚೆ ಮತ್ತು ಮುಕ್ತ ಸದಸ್ಯತ್ವ ಇರುವದರಿಂದ ಸದಸ್ಯರಿಲ್ಲದವರು ಸದಸ್ಯತ್ವ ಪಡೆಯಬೇಕು. ರಾಜಕೀಯ, ಅಥವಾ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಸಹಕಾರ ಸಂಸ್ಥೆಗಳಲ್ಲಿ , ಜವಾಬ್ದಾರಿಗಳನ್ನು ನಿರ್ವಹಿಸಬಾರದು. ಸಂಘದಲ್ಲಿರುವ ಸರ್ವ ಸದಸ್ಯರು ಹಾಗೂ ನಿರ್ದೇಶಕರು ಸಹಕಾರ ಸೇವಾ ಮನೊಭಾವ ಹೊಂದಬೇಕು. ಚುನಾವಣೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಹೊರತು ದ್ವೇಶಭಾವನೆ ಹೊಂದಬಾರದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಕಾರಿ ಅಭಿವೃದ್ದಿ
ಅಧಿಕಾರಿ ಸರೊಜಾ ಪರೀಟ ಮಾತನಾಡಿ, ಸಮುದಾಯಗಳ ಸುಸ್ಥಿರ ಅಭಿವೃದ್ದಿಗಾಗಿ ತಮ್ಮ ಸದಸ್ಯರು ಒಪ್ಪಿರುವ ನೀತಿಗಳನ್ವಯ ಕಾರ್ಯನಿರ್ವಹಿಸಿ ಸಾಮಜಿಕ ಬದ್ದತೆ ಹೊಂದಿರಬೇಕು ಅಂತಹ ಸಾಮಾಜಿಕ ಕಳಕಳಿಯ ಸಂಘ ನಿಮ್ಮದಾಗಿದ್ದು ನಿಮ್ಮೆಲ್ಲರ ಸಹಕಾರದಿಂದ ಇಂದು ಬೆಳೆದು ಹೆಮ್ಮರವಾಗಿದೆ ಇನ್ನಷ್ಷು ಮತ್ತಷ್ಟು ನಿಮ್ಮ ಸಹಾಯ ಸಹಕಾರದ ಜೋತೆಗೆ ಸಂಘದ ಮೇಲೆ ಇಟ್ಟ ನಿಮ್ಮ ವಿಶ್ವಾಸಕ್ಕೆ ಸಂಘ ನಿಮಗೆ ಚಿರ ಋಣಿಯಾಗಿರುತ್ತದೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿರಪ್ಪ ದೂಳಪ್ಪನವರ, ಜಗದೀಶ್ ಪಾಟೀಲ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಪಾಟೀಲ, ಔಷಧ ಪರವಾನಿಗೆ ನಿಯಂತ್ರಕರಾದ ಕೆ.ಎಸ್.ಮಲ್ಲಿಕಾರ್ಜುನ,
ಉಪಾಧ್ಯಕ್ಷ ಮಹಾದೇವ ಧನಾಯಿ, ನಿರ್ದೇಶಕರಾದ ಚಾಟೆ ಸಂಜಯ, ಸರಿತಾ ಧರ್ಮೋಜಿ, ವಿನೊದ ಚವ್ಹಾಣ, ಸಮೀರ ಮುಲ್ಲಾ, ಶಂಕರಗೌಡ ನಿರ್ವಾಣಿ, ಕಲಗೌಡ ಅಗಸಗಿ, ಸುಗಂಧಾ ಪೂಜೇರ, ರಾಮಪ್ಪ ಹನ್ನೂರ, ಗುರುನಾಥ ಅಕ್ಕತಂಗೆರಹಳ್ಳ, ಮುಖ್ಯ ಕಾರ್ಯನಿರ್ವಾಹಕ ರುದ್ರಪ್ಪ ಚನ್ನಣ್ಣವರ ಇದ್ದರು. ಹಳೆಯ ಆಡಳಿತ ಮಂಡಳಿಯ ಸದಸ್ಯರನ್ನು ಸತ್ಕರಿಸಲಾಯಿತು. ಭಾರತೀಯ ಜನ್ ಔಷಧಿ ಪರಿಯೋಜನಾ ಅಡಿಯಲ್ಲಿ ಔಷಧ ಮಳಿಗೆಯನ್ನು ಗಣ್ಯರು ಲೊಕಾರ್ಪಣೆಗೊಳಿಸಿದರು.