ಬೆಳಗಾವಿ: ಶಾಲೆಗೆ ಹೋಗಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಬಿ.ಕೆ. ಕಂಗ್ರಾಳಿಯ ನಿವಾಸಿ ಆಕಾಶ ದೋಂಡಿಯಾ (19) ಬಂಧಿತ. ತಾಲ್ಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.
ಬಾಲಕಿಯನ್ನು ಪುಸಲಾಯಿಸಿ ಸಲುಗೆ ಬೆಳೆಸಿದ ಆರೋಪಿ, ಗುಜರಾತಿಗೆ ಕರೆದೊಯ್ದು ಎರಡು ದಿನ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮರಳಿ ಬೆಳಗಾವಿಗೆ ಬಂದು ತಂದೆಗೆ ಫೋನ್ ಮಾಡಿದ ನಂತರ ವಿಷಯ ಗೊತ್ತಾಗಿದೆ.
ಖಡೇಬಜಾರ್ ಎಸಿಪಿ ಚಂದ್ರಪ್ಪ ನೇತೃತ್ವದಲ್ಲಿ ವಿಶೇಷ ತಂಡ, ಆರೋಪಿಯನ್ನು ಬಂಧಿಸಿದೆ. ಕ್ಯಾಂಪ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.