Ad imageAd image

ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಕೆರೆಯಂತಾದ ಪ್ರಾಥಮಿಕ ಶಾಲೆ

ratnakar
By ratnakar 1
ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಕೆರೆಯಂತಾದ ಪ್ರಾಥಮಿಕ ಶಾಲೆ
WhatsApp Group Join Now
Telegram Group Join Now

ಬೆಳಗಾವಿ: ಸರಕಾರಿ ಶಾಲೆಗಳ ಉನ್ನತಿಗಾಗಿ ಸರ್ಕಾರ ಧಾರಾಳವಾಗಿ ಹಣ ಖರ್ಚು ಮಾಡಿ ಮೈದಾನ ತಡೆಗೊಡೆ ಹಾಗೂ ಕ್ಷೀರ ಭಾಗ್ಯ, ಬಿಸಿಯೂಟ ಶೂ ಭಾಗ್ಯ ಹೀಗೆ ಅನೇಕ ಭಾಗ್ಯಗಳನ್ನು ಕರುಣಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಉನ್ನತ ಅಧಿಕಾರಿಗಳು ಸರ್ಕಾರ ಸರ್ಕಸ್ ಮಾಡುವಾಗ ಸ್ಥಳೀಯ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನ ಹಾಗೂ ಅಸಡ್ಡೆಗೆ ಶಾಲಾ ಆವರಣ ಕೆರೆಯಂತಾಗಿ ಮಕ್ಕಳ ಕಲಿಕೆಗೆ ಅಡ್ಡಯಾಗಿದೆ.

ಬೈಲಹೊಂಗಲ ಮತಕ್ಷೇತ್ರದ ಸವದತ್ತಿ ತಾಲೂಕಿನ ಮಲ್ಲೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನ ಉತ್ತರಿ ಮಳೆಯಲ್ಲಿ ಸಂಪೂರ್ಣವಾಗಿ ಕೆರೆಯಂತಾಗಿದೆ. ಮೈದಾನದಲ್ಲಿ ನೀರು ಸಂಗ್ರಹವಾಗಿದ್ದು ಕೆರೆಯಂತಾಗಿದೆ.
ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತಿ ಪಿಡಿಓ ಗಮನಕ್ಕೆ ಹತ್ತು ಹಲವಾರು ಬಾರಿ ಗಮನಕ್ಕೆ ತಂದರು ಶಾಲಾ ಮೈದಾನದ ನೀರು ಹೊರತಗೆಯಲಿಕ್ಕೆ ಗಟಾರಿ ವ್ಯವಸ್ಥೆ ಮಾಡುತಿಲ್ಲ ಎಂದು ಪಾಲಕರ ಆಪಾದನೆಯಾಗಿದೆ.

ಮಳೆಯಾದರೆ ಸಣ್ಣ ತರಗತಿಯ ಮಕ್ಕಳನ್ನು ಶಾಲೆಗೆ ಪಾಲಕರು ಕಳಿಸಲು ಹಿಂದೆಟು ಹಾಕುತಿದ್ದಾರೆ. ಶಾಲೆಗೆ ಹೊದ ಮಕ್ಕಳನ್ನು ಮಳೆ ಬಂದರೆ ಎಲ್ಲಿ ಯಾವ ಅನಾಹುತ ಅಗುತ್ತೊ ಎಂಬ ಭಯದಿಂದ ಪಾಲಕರೆ ಶಾಲೆಗೆ ಬಂದು ತಮ್ಮ ಮಕ್ಕಳನ್ನು ಕರೆದೊಯುವ ಪರಸ್ಥಿತಿಗೆ ಬಂದಿದೆ.

 

ಇಷ್ಟೊಂದು ನಿರ್ಲಕ್ಷ ವಹಿಸುವ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಪಾಲಕರು ಹಿಡಿ ಶಾಪ ಹಾಕುತಿದ್ದು ಇವರ ಮೇಲೆ ಮೆಲಾಧಿಕಾರಿಗಳಾದರು ಮಕ್ಕಳ ಭವಿಷ್ಯದ ಜೋತೆ ಆಟವಾಡುವ ಅಧಿಕಾರಿಗಳ ವಿರುದ್ದ ಕ್ರಮ ತಗೆದುಕೊಂಡು ಶಾಲಾ ಮಕ್ಕಳ ಶಿಕ್ಷಣಕ್ಕೆ ಮೈದಾನದ ನೀರು ಹೊರ ತಗೆಯುವರೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತಿದ್ದಾರೆ

WhatsApp Group Join Now
Telegram Group Join Now
Share This Article