spot_img
spot_img
spot_img
18.7 C
Belagavi
Monday, September 26, 2022
spot_img

ಮದನೂರ ತಾ. ಪಂ. ಕ್ಷೇತ್ರ ಯಥಾಸ್ಥಿತಿ ಉಳಿಸಲು ಗ್ರಾಮ ಪಂಚಾಯಿತಿ ಸದಸ್ಯೆ ಪೂಜಾ ಒತ್ತಾಯ

spot_img
spot_img

For Breaking News Download App

ಬೀದರ್ : ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ 2022 ರಲ್ಲಿ ಜರುಗಲಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಿಮಿತ್ತ ಕ್ಷೇತ್ರ ವಿಂಗಡನೆ ಮಾಡಿರುವ ಕಮಲನಗರ ತಹಶೀಲ್ದಾರರು ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ವಿಸರ್ಜಿಸಿ ದೂರದ ಮೂರ್ಕಿ ಕ್ಷೇತ್ರದಲ್ಲಿ ಸೇರಿದ್ದಲ್ಲದೆ ಮದನೂರ ಗ್ರಾಮ ಪಂಚಾಯಿತಿಯನ್ನು ಸರಿ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ದಾಬಕಾ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಿದ್ದಾರೆ.

ಮದನೂರ ಗ್ರಾಮ ಪಂಚಾಯಿತಿ ಯಿಂದ ಕೇವಲ ಐದು ಕಿಲೋಮೀಟರ್ ಅಂತರದಲ್ಲಿ ಇರುವ ನೂತನ ತಾಲೂಕು ಕ್ಷೇತ್ರವಾದ ಕಮಲನಗರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯ್ತಿ ಗೆ ಸೇರಿಸದೆ ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ರದ್ದುಗೊಳಿಸಿ 12 ಕಿಲೋಮೀಟರ್ ದೂರದಲ್ಲಿರುವ ಮೂರ್ಕಿ ತಾಲೂಕು ಪಂಚಾಯತ್ ಕ್ಷೇತ್ರ ಮತ್ತು 25 ಕಿಲೋಮೀಟರ್ ದೂರದಲ್ಲಿರುವ ದಾಬಕಾ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮದನೂರ ಗ್ರಾಮ ಪಂಚಾಯಿತಿಯನ್ನು ಸೇರಿಸಿರುವ ತಹಶೀಲ್ದಾರಾದ ನಡೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ತಹಶೀಲ್ದಾರರು ಮದನೂರ ಗ್ರಾಮ ಪಂಚಾಯತಿಯನ್ನು ಬೇರೆ ಕ್ಷೇತ್ರದಲ್ಲಿ ಸೇರಿಸಿರುವ ಪಟ್ಟಿಯಿಂದ ಕೈಬಿಟ್ಟು ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ಯಥಾಸ್ಥಿತಿ ಮುಂದುವರಿಸಿ ಕಮಲನಗರ ಜಿಲ್ಲಾ ಪಂಚಾಯತ್ ಎಂದಿನಂತೆ ಕಮಲನಗರ ಕ್ಷೇತ್ರದಲ್ಲೆ ಮುಂದುವರಿಸಬೇಕೆಂದು ಮದನೂರ ಗ್ರಾಮ ಪಂಚಾಯಿತಿ ಸದಸ್ಯೆ ಪೂಜಾ ಗುಂಡಪ್ಪಾ ಬೇಲ್ಲೆ ಮದನೂರ ಆಗ್ರಹಿಸಿದ್ದಾರೆ.

ಮದನೂರ ಗ್ರಾಮ ಪಂಚಾಯತ್ ಸಂಪೂರ್ಣ ಕೃಷಿಯಾಧಾರಿತ ಕ್ಷೇತ್ರವಾಗಿದ್ದು. ಒಂದು ವೇಳೆ ಕಮಲನಗರ ಕ್ಷೇತ್ರವಲ್ಲದೆ ಇನ್ಯಾವುದು ಕ್ಷೇತ್ರಕ್ಕೆ ಸೇರಿಸಿದರೆ ಗ್ರಾಮ ಪಂಚಾಯಿತಿಯ ಮದನೂರ ಮತ್ತು ಖತಗಾಂವ ಗ್ರಾಮದ ರೈತಾಪಿ ವರ್ಗ ತೊಂದರೆಗೆ ಸಿಕ್ಕಿಕೊಳ್ಳಲಿದೆ, ಅಲ್ಲದೆ ಮದನೂರ ಪಂಚಾಯಿತಿ ಸಂಪೂರ್ಣ ಕನ್ನಡ ಭಾಷೆ ಮಾತಾಡುವ ಪಂಚಾಯತಿ ಆಗಿದ್ದು, ಮೂರ್ಕಿ ಮತ್ತು ದಾಬಕಾ ಕ್ಷೇತ್ರಕ್ಕೆ ಸೇರಿಸಿದರೆ ಭಾಷಾ ವ್ಯತ್ಯಾಸವುಂಟಾಗುತ್ತದೆ ದಾಬಕಾ ಮತ್ತು ಮೂರ್ಕಿ ಕ್ಷೇತ್ರದ ಸರಾಸರಿ ಜನರು ಮರಾಠಿ ಮಾತನಾಡುವ ರಾಗಿದ್ದಾರೆ.

ತಹಶೀಲ್ದಾರರು ಮದನೂರ ಗ್ರಾಮ ಪಂಚಾಯಿತಿಯನ್ನು ಮೂರ್ಕಿ ಮತ್ತು ದಾಬಕಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿರುವ ಪಟ್ಟಿಯಿಂದ ಹೆಸರು ಬಿಡದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುವುದಲ್ಲದೆ, ಉಗ್ರ ಪ್ರತಿಭಟನೆ ಮುಖಾಂತರ ಮುಂಬರುವ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -