Ad imageAd image

ಪಶು ಚಿಕಿತ್ಸಾಲಯಕ್ಕೆ ದಿಢೀರ ಭೇಟಿ ನೀಡಿದ : ಜಿಪಂ ಸಿಇಒ ರಾಹುಲ್ ಶಿಂಧೆ

ratnakar
ಪಶು ಚಿಕಿತ್ಸಾಲಯಕ್ಕೆ ದಿಢೀರ ಭೇಟಿ ನೀಡಿದ : ಜಿಪಂ ಸಿಇಒ ರಾಹುಲ್ ಶಿಂಧೆ
WhatsApp Group Join Now
Telegram Group Join Now

ಬೆಳಗಾವಿ : ಸೆ.19ರಂದು ಅನೀರೀಕ್ಷಿತವಾಗಿ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಪಶುಚಿಕಿತ್ಸಾಲಯಕ್ಕೆ ಭೇಟಿ ನೀಡಿ ಔಷಧಿ ದಾಸ್ತಾನು ವಹಿ/ ಲಸಿಕಾ ವಹಿ/ಕೃತಕ ಗರ್ಭಧಾರಣಾ ವಹಿಗಳನ್ನು ಪರಿಶೀಲಿಸಿ ತದ ನಂತರ ಕುಂದರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಡಚಿನಮಲ್ಕಿ ಗ್ರಾಮಕ್ಕೆ ಬೇಟಿ ನೀಡಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಎನ್ ಎಲ್ ಎಮ್ ಇಡಿಪಿ ಯೋಜನೆಯಡಿ ನಿರ್ಮಾಣವಾದ 525ರ ಆಡಿನ ಘಟಕಗಳನ್ನು ವೀಕ್ಷಣೆ ಮಾಡಿದರು. ಶೇಡನಲ್ಲಿ ಸುಮಾರು 496 ಮೇಕೆಗಳು ಇದ್ದವು ಹಾಗೂ ಸದರಿ ಯೋಜನೆಯಡಿ ಫಲಾನುಭವಿಯಾದ ಮಹಮ್ಮದ ಷರೀಫ್ ಮುಕ್ತಾಮ್ ಸಾಬ್ ಪಾಟೀಲ ರವರ ಜೊತೆ ಆಡು ಸಾಕಾಣಿಕೆಯಿಂದ ಬರುವ ಆದಾಯ/ಖರ್ಚುಗಳು ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಗೋಕಾಕ ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ವಾರ್ಷಿಕ ಗುರಿಗಳನ್ವಯ ಪ್ರಗತಿಯನ್ನು ಸಾಧಿಸಲು ಕಟ್ಟು ನಿಟ್ಟಿನ ನಿರ್ದೇಶನ ಹಾಗೂ 21ನೇ ಜಾನುವಾರು ಗಣತಿಯನ್ನು ಸರಿಯಾಗಿ ನಿರ್ವಹಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಗೋಕಾಕ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತಿ ಅವರೊಂದಿಗೆ ಮಾತನಾಡಿ ತಾಲೂಕು ಪಂಚಾಯತ ವ್ಯಾಪ್ತಿಯಲ್ಲಿ ಬರುವ 33 ಗ್ರಾಮ ಪಂಚಾಯತಗಳಲ್ಲಿ ಮನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ 50 ದನ ಶೆಡ್ /ಕುರಿ ಶೆಡ್ ಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಅಭಿಯಾನದ ರೂಪದಲ್ಲಿ ಅನುಷ್ಟಾನಗೊಳಿಸಲು ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಆಯಾ ಗ್ರಾಮಗಳ ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸುವಾಗ ಅವರಗಳಲ್ಲಿ ಇರುವ ದನಕರುಗಳ ಮಾಹಿತಿಯನ್ನು ಪಡೆದು ಧೃಡೀಕರಣ ಪತ್ರವನ್ನು ನೀಡಲು ಸಹ ಸೂಚಿಸಿದರು.

ಮುಂದುವರೆದು, ಇಲಾಖೆಯ ಇನ್ನೀತರೆ ಕಾರ್ಯಕ್ರಮಗಳಾದ ವಿವಿಧ ಲಸಿಕಾ ಕಾರ್ಯಕ್ರಮಗಳನ್ನು ಶೇ.100 ರಷ್ಟು ಪ್ರಗತಿ ಸಾಧಿಸಲು ಪಶು ಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಎಲ್ಲ ಪಶು ಸಖಿಯರಿಗೆ ದಿನದ ವಹಿಗಳನ್ನು ವಿತರಿಸಿ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ಇಲಾಖೆ ಮತ್ತು ರೈತ ಬಾಂಧವರ ಜೊತೆಗೆ ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಶು ಪಾಲನಾ ಹಾಗೂ ವೈದಕಿಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ ಕುಲೇರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತಿ , ತಹಶೀಲ್ದಾರ ಡಾ. ಮೋಹನ್ ಭಸ್ಮೆ, ಸಹಾಯಕ ಕಾರ್ಯಪಾಲಕ ಅಭಿಯಂತರರ ಉದಯಕುಮಾರ ಕಾಂಬಳೆ, ಸಹಾಯಕ ನಿರ್ದೇಶಕ(ಪಂಚಾಯತರಾಜ್) ವಿನಯ್ ಕುಮಾರ ಹಾಗೂ ಪಶು ಪಾಲನಾ ಇಲಾಖೆಯ ಅಧಿಕಾರಿ/ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article