ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭವಾಗಿವೆ 2 ತಿಂಗಳು ಬೇಸಿಗೆ ರಜೆ ಬಳಿಕ 2023-24 ರ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ.
ಮೇ 29ರಂದೇ ಶಾಲೆಗಳಲ್ಲಿ ಚಟುವಟಿಕೆ ಶುರುವಾಗಿದ್ದು, ಮೇ 31 ರಿಂದ ಅಧಿಕೃತವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಓಪನ್ ಆಗಿವೆ. ಮಕ್ಕಳ ಸ್ವಾಗತಕ್ಕಾಗಿ ಶಿಕ್ಷಕರು ಮತ್ತು ಸಿಬ್ಬಂದಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜಾಗಿದ್ದಾರೆ. ಅದಕ್ಕಾಗಿ ಶಿಕ್ಷಣ ಇಲಾಖೆ ಕೂಡ ಕೆಲ ಸೂಚನೆಗಳನ್ನ ನೀಡಿತ್ತು.
ಇಲಾಖೆ ಸೂಚನೆಯಂತೆ ಶಾಲಾ ಪ್ರಾರಂಭಕ್ಕೆ ಎಲ್ಲ ಶಾಲೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಶಾಲೆಯ ಪ್ರತಿಯೊಂದು ಕೊಠಡಿ, ಶೌಚಾಲಯ, ಆವರಣ ಸೇರಿದಂತೆ ಶಾಲೆ ಸುತ್ತಮುತ್ತ ಎಲ್ಲವನ್ನೂ ಸ್ವಚ್ಛಗೊಳಿಸಲಾಗಿದೆ. ಎರಡು ತಿಂಗಳ ಬೇಸಿಗೆ ರಜೆ ಬಳಿಕ ಮರಳಿ ಶಾಲೆಗೆ ಬರುತ್ತಿರುವ ಮಕ್ಕಳನ್ನು ಸ್ವಾಗತಿಸಲು ಶಾಲೆಯನ್ನು ಸಿಂಗರಿಸಲಾಗಿದೆ. ಮಕ್ಕಳು ಖುಷಿ ಖುಸಿಯಾಗಿ ಪುಸ್ತಕ ಜೋಡಿಸ್ಕೊಂಡು, ಬ್ಯಾಗ್ ಹಾಕೊಂಡು, ತಲೆ ಬಾಚ್ಕೊಂಡು, ಯೂನಿಫಾರ್ಮ್ ಹಾಕ್ಕೊಂಡು ರೆಡಿಯಾಗಿ ಶಾಲೆಗಳನ್ನು ಹೆಜ್ಜೆ ಇಡಲಿದ್ದಾರೆ. ಮಕ್ಕಳ ಸ್ವಾಗತಕ್ಕೆ ಟೀಚರ್ಸ್ ರೆಡಿ ಆಗಿದ್ದಾರೆ.