Ad imageAd image

ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ

ratnakar
ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ
WhatsApp Group Join Now
Telegram Group Join Now

ಬೆಂಗಳೂರು: ತುಂಗಭದ್ರಾ ಜಲಾಶಯವನ್ನ ರಾಜ್ಯ ಸರ್ಕಾರ ಕಂಟ್ರೋಲ್‌ ಮಾಡಲ್ಲ. ಅದಕ್ಕೇ ಆದ ಪ್ರತ್ಯೇಕ ಸಮಿತಿಯಿದೆ. ನಾವು ಸದಸ್ಯರು ಅಷ್ಟೇ. ಆದರೂ ಅದು ನಮ್ಮದೇ. ಇನ್ನೂ 4-5 ದಿನಗಳಲ್ಲಿ ಗೇಟ್‌ ರಿಪೇರಿ ಮಾಡುವ ಕೆಲಸ ಆಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಅಭಯ ನೀಡಿದರು.

ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಬಿ ಡ್ಯಾಮ್‌ಗೆ ಹೋಗಿ ವೀಕ್ಷಣೆ ಮಾಡಿ, ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ಗುತ್ತಿಗೆದಾರರ ಜೊತೆ ಮಾತಾಡಿದ್ದೇನೆ. ಡಿಸೈನ್‌ಗಳನ್ನ ಕಳಿಸಿಕೊಟ್ಟಿದ್ದೇವೆ. ಇನ್ನೂ 4-5 ದಿನಗಳಲ್ಲಿ ರಿಪೇರಿ ಕೆಲಸ ಆಗುತ್ತೆ. ರೈತರ ಬೆಳೆ ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ (ಆ.13) ನಮ್ಮ ಸಿಎಂ ಹೋಗ್ತಾರೆ. ನಾನು ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇನೆ. ಯಾರೂ ಗಾಬರಿ ಪಡಬೇಕಿಲ್ಲ ಎಂದು ಅಭಯ ನೀಡಿದರು.

ಡ್ಯಾಂ ಸ್ಥಿತಿ ಬಹಳ ಡೇಂಜರ್ ಇತ್ತು. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ಸುರಕ್ಷತೆಗಾಗಿ ಟೀಮ್ ಮಾಡಿ ಎಲ್ಲಾ ಡ್ಯಾಮ್‌ಗಳಿಗೂ ಕಳಿಸಿಕೊಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ತಜ್ಞರ ಸಮಿತಿ ರಚನೆ ಮಾಡ್ತೇವೆ. ಆ ಸಮಿತಿ ಎಲ್ಲಾ ಡ್ಯಾಮ್‌ಗಳಿಗೂ ವಿಸಿಟ್ ಮಾಡಿ ಪರಿಶೀಲಿಸುತ್ತದೆ. ಬೇರೆ ಕಡೆ ಡಬಲ್ ಆಪ್ಷನ್ಸ್ ಇದೆ, ಒಂದು ಗೇಟ್‌ಗೆ ಎರಡು ಲಿಂಕ್ ಇದ್ದಾವೆ. ಇಲ್ಲಿ ಒಂದೇ ಒಂದು ಚೈನ್ ಇತ್ತು, ಅದು ಕಟ್ ಆಗಿದೆ. ನೀರು, ನೋಡಿದ್ರೆ ಸ್ವಲ್ಪ ಸಮಸ್ಯೆಯಿತ್ತು. ನೀರು ಉಳಿಸಬಹುದು, 55-60 ಟಿಎಂಸಿ ನೀರು ಉಳಿಸುವ ವ್ಯವಸ್ಥೆ ಆಗುತ್ತಿದೆ ಎಂದು ಹೇಳಿದರು.

ಇನ್ನೂ ಆಲಮಟ್ಟಿ ಡ್ಯಾಂಗೆ ಮಾನ್ಯತೆ ಕೊಟ್ಟಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಡಿಕೆಶಿ, ಆರೋಪ ಮಾಡುವವರು, ರಾಜಕೀಯ ಮಾತನಾಡುವವರು ಏನು ಬೇಕಾದರೂ ಮಾತಾಡಲಿ. ತುಂಗಭದ್ರಾ ಡ್ಯಾಂ ಸರ್ಕಾರ ಕಂಟ್ರೋಲ್ ಮಾಡಲ್ಲ. ಅದಕ್ಕೆ ಆದ ಕಮಿಟಿಯಿದೆ. ನಾವು ಸದಸ್ಯರು ಅಷ್ಟೇ. ಆದರೂ ಅದು ನಮ್ಮದೇ. ಏಕೆಂದರೆ ಹೆಚ್ಚಿನ ಬಳಕೆ ನಮ್ಮದು, ಹಾಗಾಗಿ ಜವಬ್ದಾರಿ ಹೆಚ್ಚಾಗಿದೆ ಎಂದು ವಿವರಿಸಿದರು.

WhatsApp Group Join Now
Telegram Group Join Now
Share This Article