ಹುಕ್ಕೇರಿ ತಾಲೂಕಿನ ಗೋಟುರ್ ಗ್ರಾಮ ಪಂಚಾಯತ್ ಐಬಿ ಕ್ರಾಸ್ ಹತ್ತಿರ ಬೆಳಗಾವಿ ಸಂಕೇಶ್ವರ ಬೈಪಾಸ್ ಹೈವೇ ರಸ್ತೆ ದಾಟಿ ಹೋಗಲು ಕನಿಷ್ಠ ಮೂರು ಮೀಟರ್ ಬ್ರಿಜ್ ನಿರ್ಮಾಣದ ಅವಶ್ಯಕತೆ ಇದೆ ಎಂದು ಗೋಟುರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಗೋಟುರ್ ಗ್ರಾಮ NH 4 ರಸ್ತೆ ಪಕ್ಕದಲ್ಲಿರುವ 300 ಎಕರೆ ಹೊಲಗದ್ದೆಗಳು ಹೋಗಲು ರೈತರಿಗೆ ಹಾಗೂ ಶಾಲಾ ಮಕ್ಕಳಿಗೆ ಸಂಚರಿಸಲು ತೊಂದರೆ ಆಗುತ್ತಿದೆ. ಈಗಿರುವ ಬೆಳಗಾವಿ ಸಂಕೇಶ್ವರ್ NH4 ರಸ್ತೆಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಗ್ರಾಮಸ್ಥರುಗಳಿಗೆ ಸಂಚರಿಸಲು ತೊಂದರೆಯಾಗುತ್ತಾ ಇದೆ ಆದ್ದರಿಂದ ಕನಿಷ್ಠ3 ಮೀಟರ್ ಬ್ರಿಡ್ಜ್ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ಈ ವೇಳೆ ಗುಟ್ಟೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ರವೀಂದ್ರ ಮಾಸೇವಾಡಿ ,ದುಂಡಪ್ಪ ಕಮತೆ, ಸಚಿನ್ ಮಣ್ಣಿಕೇರಿ, ಹನುಮಂತ ಕಲ್ಲಪ್ಪ ಶೇಖನ್ನವರ, ರಾಜು ಪಾಟೀಲ, ಪ್ರಕಾಶ್ ಪಾಟೀಲ, ರುದ್ರಗೌಡ ಪಾಟೀಲ,ಶಿವಾಜಿ ಸಲಾದಿ, ಅಪ್ಪಸಾಹೇಬ್ ಪಾಟೀಲ, ಎ ಬಿ ಪಾಟೀಲ, ಬೈರು ಕಮತೆ ,ಶಶಿಕಾಂತ್ ಕಮತೆ ,ಸುರೇಶ್ ಪಾಟೀಲ, ಸಿದ್ದಪ್ಪ ರವಳೋಜಿ, ಮುಂತಾದವರು ಉಪಸ್ಥಿತರಿದ್ದರು