Ad imageAd image

ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ – ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸ್ವಾಮೀಜಿ ವಿರುದ್ಧ ಎಫ್ ಐಆರ್

ratnakar
ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ – ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸ್ವಾಮೀಜಿ ವಿರುದ್ಧ ಎಫ್ ಐಆರ್
WhatsApp Group Join Now
Telegram Group Join Now

ಗುಲ್ಬರ್ಗ: ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂದು ವಕ್ಫ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ (ಮರುಳಾರಾಧ್ಯ ಸ್ವಾಮೀಜಿ) ವಿರುದ್ಧ ಎಫ್‌ಐಆರ್ (ಎಫ್‌ಐಆರ್) ದಾಖಲಾಗಿದೆ. 

ರಾಜ್ಯಾದ್ಯಂತ ವಕ್ಫ್ ನೋಟಿಸ್ (ವಕ್ಫ್ ಸೂಚನೆ) ವಿವಾದ ಬುಗಿಲೆದ್ದಿತ್ತು. ಪರಿಣಾಮ ಜಿಲ್ಲೆಯಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಎಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಪೊಲೀಸರ ಮುಂದೆಯೇ, ‘ಜೀವ ಕೊಡುವುದಕ್ಕೂ, ಜೀವ ತೆಗೆಯುವುದಕ್ಕೂ ಸಿದ್ಧರಿದ್ದೀವಿ ಹುಷಾರ್.. ಯುವಕರ ಮನೆಯಲ್ಲಿ ತಲ್ವಾರ್ ಇದ್ದಾರೆ. ಎಲ್ಲರ ಮನೆಯಲ್ಲಿ ಎಲ್ಲಿದೆ. ಯಾರ್ ಬರುತ್ತಾರೆ ಅವರನ್ನು ತಲ್ವಾರ್ ನಿಂದ ಕಡಿಯುತ್ತೇವೆ. ಇನ್ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡೋಣ’ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿಯ ಹೇಳಿಕೆಯ ಆಧಾರದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆ 299, 353/2 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವಿಟ್ಟುಕೊಂಡಿದೆ ಎಂದು ಎಫ್ ಐಆರ್ ದಾಖಲಿಸಲಾಗಿದೆ.

 

WhatsApp Group Join Now
Telegram Group Join Now
Share This Article