Ad imageAd image

ಗದಗ– ಬೆಟಗೇರಿ ನಗರಸಭೆ ಗದ್ದುಗೆ ಗುದ್ದಾಟ: ಮತದಾರರ ಪಟ್ಟಿಯಲ್ಲಿ ಎಂಎಲ್​ಸಿ ಹೆಸರು ಸೇರಿಸುವ ಅರ್ಜಿ ತಿರಸ್ಕಾರ

ratnakar
ಗದಗ– ಬೆಟಗೇರಿ ನಗರಸಭೆ ಗದ್ದುಗೆ ಗುದ್ದಾಟ: ಮತದಾರರ ಪಟ್ಟಿಯಲ್ಲಿ ಎಂಎಲ್​ಸಿ ಹೆಸರು ಸೇರಿಸುವ ಅರ್ಜಿ ತಿರಸ್ಕಾರ
WhatsApp Group Join Now
Telegram Group Join Now

ಗದಗ: ಗದಗ-ಬೆಟಗೇರಿ ನಗರಸಭೆ ಪದೇ ಪದೇ ಯಡವಟ್ಟುಗಳ ಮೂಲಕ ಕುಖ್ಯಾತಿ ಪಡೆದಿದೆ. ಕಳೆದ ವಾರ ಪೌರಾಯುಕ್ತರ ಪೋರ್ಜರಿ ಸಹಿ, ನಕಲಿ ಠರಾವು ಪ್ರಕರಣ ಭಾರಿ ಸದ್ದು ಮಾಡಿತ್ತು. ಇದು ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅಂದ್ಹಾಗೆ ಗದಗ-ಬೆಟಗೇರಿ ನಗರಸಭೆ ಒಟ್ಟು 35 ಸದಸ್ಯರ ಬಲ ಹೊಂದಿದೆ. ಬಿಜೆಪಿ 18 ಸದಸ್ಯರು ಹಾಗೂ ಒಬ್ಬ ಬಿಜೆಪಿ ಸಂಸದ ಸೇರಿ ಒಟ್ಟು 19 ಬಲ ಹೊಂದಿದೆ. ಕಾಂಗ್ರೆಸ್ನ 17 ಸದಸ್ಯರು, ಓರ್ವ ಶಾಸಕರು ಸೇರಿ ಒಟ್ಟು 18 ಸದಸ್ಯರ ಬಲ ಹೊಂದಿದೆ. ಮೊದಲನೇ ಅವಧಿಗೆ ಬಿಜೆಪಿ ಅಧಿಕಾರ ಮಾಡಿದೆ. ಈಗ 2ನೇ ಅವಧಿಗೆ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಹೊರಡಿಸಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಿದ್ರೆ. ಉಪಾದ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಈ ಬಾರಿಯಾದ್ರೂ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾವೇರಿಯಿಂದ ಗದಗ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆನ್ ಲೈನ್​ನಲ್ಲಿ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ಗೆ ಟಾಂಗ್ ಕೊಡಲು ಬಿಜೆಪಿ ಕೂಡ ಎಂಲ್ಸಿಸಿ ಎಸ್ ವಿ ಸಂಕನೂರ ಹುಬ್ಬಳ್ಳಿ ಯಿಂದ ಗದಗ ಕ್ಷೇತ್ರದಲ್ಲಿ ಹೆಸರು ಸೇರಿಸಲು ಪ್ಲಾನ್ ಮಾಡಿ ಅರ್ಜಿ ಸಲ್ಲಿಸಿದ್ರು. ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಬಿಜೆಪಿ ಎಂಎಲ್ಸಿ ಅರ್ಜಿ ತಿರಸ್ಕಾರ ಆಗುತ್ತೆ. ಕಾಂಗ್ರೆಸ್ ಎಂಎಲ್ಸಿ ಹೆಸರು ಸೇರ್ಪಡೆ ಆಗುತ್ತೆ ಅನ್ನೋ ಚರ್ಚೆ ತೀವ್ರವಾಗಿತ್ತು. ಆದ್ರೆ, ಇಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸದಂತೆ ಎರಡು ಪಕ್ಷಗಳು ದೂರು ನೀಡಿವೆ. ಎರಡು ಕಡೆ ವಾದವಿವಾದ ಆಲಿಸಿದ ಗದಗ ಎಸಿ ಗಂಗ್ಗಪ್ಪ ಅವ್ರು ಎರಡು ಅರ್ಜಿಗಳು ತಿರಸ್ಕಾರ ಮಾಡಿ ಆದೇಶ ಹೊರಡಿಸಿದ್ದಾರೆ. ಉಪವಿಭಾಗಾಧಿಕಾರಿ ಗಂಗಪ್ಪ ಅವರ ಆದೇಶ ಎರಡು ಪಕ್ಷಗಳಿಗೆ ಶಾಕ್ ನೀಡಿದೆ.

ಇನ್ನೊಂದೆಡೆ ನಕಲಿ ಠರಾವು, ಪೌರಾಯುಕ್ತರ ನಕಲಿ ಸಹಿ ಪ್ರಕರಣದಲ್ಲಿ ಬಿಜೆಪಿ ಮೂರು ಸದಸ್ಯರು ಸಿಲುಕಿಕೊಂಡಿದ್ದಾರೆ‌. ಸಚಿವ ಎಚ್ ಕೆ ಪಾಟೀಲ್ ಅಧಿಕಾರಿ ಮೇಲೆ ಒತ್ತಡ ಹಾಕಿ ಕೇಸ್ ಮಾಡಿಸಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ. ಈ ಮೂಲಕ ಬಿಜೆಪಿ ಸದಸ್ಯರ ನಗರಸಭೆಗೆ ಬಾರದಂತೆ ಮಾಡಿ ಅಧಿಕಾರದ ಚುಕ್ಕಾಣಿಯ ಹಿಡಿಯುವ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ ಕೈ ನಾಯಕರು ಅಂತ ಆರೋಪಿಸಿದ್ರು. ಈ ಪ್ರಕರಣಕ್ಕೆ ಬಿಜೆಪಿ ಹೈಕೋರ್ಟ್ ನಿಂದ ತಡೆ ತಂದಿದೆ. ಹೀಗಾಗಿ ಈ ಪ್ಲಾನ್ ಫಲಿಸದಕ್ಕೆ ಎಂಎಲ್ಸಿ ಸಲೀಂ ಅಹ್ಮದ್ ಅವರ ಹೆಸರು ಗದಗ ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಅಧಿಕಾರಕ್ಕೆ ಏರುವ ಹುನ್ನಾರ ಮಾಡಿದ್ರು. ಆದರೆ, ಸಚಿವ ಎಚ್ ಕೆ ಪಾಟೀಲ್ ತಂತ್ರ ಫಲಿಸಲಿಲ್ಲ ಅಂತ ಬಿಜೆಪಿ ಆರೋಪಿಸಿದೆ. ಇದರ ಬೆನ್ನಲೇ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಗೆ ತಡೆಯಾಜ್ನೆ ತರುವ ಮೂಲಕ ಆಡಳಿತಾಧಿಕಾರಿಯ ಅಧಿಕಾರ ಮುಂದುವರಿಸುತ್ತಿದೆ. ಈ ಮೂಲಕ ಅವಳಿ ನಗರದ ಅಭಿವೃದ್ಧಿ ಕುಂಠಿತವಾಗುತ್ತೆ ಅಂತ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
Share This Article