ಬೆಂಗಳೂರು: ಇಂದಿನಿಂದ(ಆ.4) ಆಗಸ್ಟ್ 15 ರವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಫ್ಲವರ್ ಶೋ ವೀಕ್ಷಣೆಗೆ ಲಕ್ಷಾಂತರ ಜನ ಆಗಮ ಹಿನ್ನಲೆ ಸಂಚಾರ ದಟ್ಟಣೆ ಉಂಟಾಗಲಿದೆ. ಹಾಗಾಗಿ ಪರ್ಯಾಯ ಮಾರ್ಗ ಜೊತೆಗೆ ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚನೆ ನೀಡಲಾಗಿದೆ.
6ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯಲಿರುವ 214ನೇ ಫ್ಲವರ್ ಶೋ ಇದಾಗಿದೆ. ಇನ್ನು ಇದನ್ನು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯರನವರು ಉದ್ಘಾಟನೆ ಮಾಡಲಿದ್ದಾರೆ. ವಿಧಾನಸೌಧ, ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ ಇಲ್ಲಿ ಇರಲಿದೆ. ಇಂದಿನಿಂದ ಆರಂಭವಾಗುವ ಫಲಪುಷ್ಪ ಪ್ರದರ್ಶನ ಆಗಸ್ಟ್ 15ರವರೆಗೂ ನಡೆಯಲಿದೆ. ಇನ್ನು ಈ ಬಾರಿಯ ಫ್ಲವರ್ ಶೋಗೆ ಎರಡೂವರೆ ಕೋಟಿ ಹಣ ವೆಚ್ಚ ಮಾಡಲಾಗಿದೆ.
ದರ್ಶನದಲ್ಲಿ ಹಲವು ಕಲೆಗಳ ಸಾರುವ ಉದ್ದೇಶದಿಂದ ಮಕ್ಕಳು, ಮಹಿಳೆಯರಿಗೂ ಕೆಲ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ. ಇನ್ನು ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ವೀಕ್ ಡೇಸ್ನಲ್ಲಿ ಹಿರಿಯರಿಗೆ 70 ರೂ ಹಾಗೂ ಮಕ್ಕಳಿಗೆ 30 ರೂ ನಿಗದಿ ಮಾಡಲಾಗಿದೆ. ಜೊತೆಗೆ ಲಾಲ್ಬಾಗ್ನಲ್ಲಿ ಭದ್ರತೆ ದೃಷ್ಟಿಯಿಂದ 200 ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, 300ರಿಂದ 400 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿ, ಹೆಲ್ತ್ ಕ್ಯಾಂಪ್ ಕೂಡ ವ್ಯವಸ್ಥೆ ಮಾಡಲಾಗಿದೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯದಿಂದಲೂ ಹೂವುಗಳನ್ನು ತರಿಸಿಕೊಳ್ಳಲಾಗುತ್ತಿದೆ. ಹೌದು, ಬರೊಬ್ಬರಿ15ರಿಂದ17 ಲಕ್ಷ ಹೂವುಗಳಿಂದ ಕಂಗೊಳಿಸಲಿದೆ. ಇನ್ನು ಫ್ಲವರ್ ಶೋ ವೀಕ್ಷಣೆಗೆ ಬರುವವರಿಗೆ 4 ಕಡೆ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಟ್ರಾಫಿಕ್ ಹೆಚ್ಚಾಗುವ ದೃಷ್ಟಿಯಿಂದ ಮೆಟ್ರೋ, ಬಸ್ ಬಳಕೆಗೆ ಮಾಡಲು ಮನವಿ ಮಾಡಲಾಗಿದೆ.