ಪೊಲೀಸ್ ಹಾಗೂ RAW ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಕೇರಳದ ಇಡುಕಿ ಮೂಲದ ಆರೋಪಿ ಬೆನೆಡಿಕ್ಟ್ ಸಾಬು ಬಂಧಿತ ಆರೋಪಿ.
6 ತಿಂಗಳ ಹಿಂದೆ ಜಿಎನ್ಎಂ ಕೋರ್ಸ್ಗೆ ಸೇರಿದ್ದ ಬೆನೆಡಿಕ್ಟ್ ಸಾಬು ತಾನು ಕೇರಳದ ಕೃಷಿ ಅಧಿಕಾರಿ ಎಂದು ಪ್ರಿನ್ಸಿಪಾಲ್ ಬಳಿ ಹೇಳಿದ್ದ. ಬಳಿಕ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದ. ಸದ್ಯ RAW ಫೀಲ್ಡ್ ಏಜೆಂಟ್ ಆಗಿರುವುದಾಗಿ ಹೇಳಿಕೊಂಡಿದ್ದ. ಕಾಲೇಜಿನಲ್ಲಿ ಡ್ರಗ್ಸ್ ಅವೇರ್ನೆಸ್ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯ ಕಳ್ಳಾಟ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...
ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ.
ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...