spot_img
22.9 C
Belagavi
Saturday, December 3, 2022
spot_img

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ.

ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು ಚಾಲಕ ನಿಖಿಲ್ ಕದಂ(24), ಬೈಕ್​ನಲ್ಲಿದ್ದ ವೃದ್ಧೆ ಹನುಮವ್ವಾ ಚಿಕ್ಕಲಕಟ್ಟಿ ಮೃತ ದುರ್ದೈವಿಗಳು. ಕುಡಚಿ ಪೊಲೀಸ್​ ಠಾಣೆಯ ಎಎಸ್​ಐ ವೈ.ಎಂ.ಹಲಕಿರವರ ಪತ್ನಿ ರುಕ್ಮಿಣಿ ಸಾವನ್ನಪ್ಪಿದ್ದಾರೆ.

ಬೆಳಗಾವಿ-ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್​ನಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಬೆಳಗಾವಿಯತ್ತ ಬರುತ್ತಿತ್ತು.

ಈ ವೇಳೆ ಸ್ವಿಫ್ಟ್ ಡಿಸೈರ್ ಕಾರು ಮತ್ತು ಬೈಕ್​ಗೆ ಡಿಕ್ಕಿ ಹೊಡೆದಿದೆ.

ಸ್ವಿಫ್ಟ್​ ಕಾರಿನಲ್ಲಿದ್ದ ಮೂವರು, ಬೈಕ್​ನಲ್ಲಿದ್ದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿದ್ದಾರೆ.ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related News

50 ಲಕ್ಷ ರೂ,ಗಳ ವೆಚ್ಚದಲ್ಲಿ ಮಂಡೋಳಿ ಗ್ರಾಮದ ರಸ್ತೆಗಳ ಅಭಿವೃದ್ಧಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಗಣಿ ನಿಧಿಯ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದು, ಶನಿವಾರ...

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಯೋಜನೆಗಳ ಸರಣಿ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 60 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶನಿವಾರ ಕಾಂಕ್ರೀಟ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -