ಕಲಬುರಗಿ : ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದವರ ಮೇಲೆ ಡಿಜೆ ಇದ್ದ ಮಿನಿ ಲಾರಿ ಹರಿದು ನಾಲ್ವರು ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸೇಡಂ ತಾಲೂಕಿನ ಕಡತಾಲ ತಾಂಡದಲ್ಲಿ ನಡೆದಿದೆ.
ಮೃತರು ಮೆದಕ ತಾಂಡದ ಸುಗಣಾಬಾಯಿ ಚೌವ್ಹಾಣ (40), ವಿಜ್ಜಿಬಾಯಿ ರಾಥೋಡ್ (30), ಕುಮಾರನಾಯಕ ರಾಥೋಡ್ (35) ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನೃತ್ಯ ಮಾಡುತ್ತಿದ್ದವರ ವೇಳೆ ಮಿನಿ ಲಾರಿ ಏಕಾಏಕಿ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.