ಬೆಳಗಾವಿ : ಜಿಲ್ಲೆಯ ಗೋಕಾಕ್ ನಗರದಲ್ಲಿ ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳಗಾವಿಯ ಅಬ್ದುಲ್ ಖಾದಿರ್, ಮೋಸಿನ್ ಜಮಾದಾರ, ಸಲ್ಮಾನ ಮುಲ್ಲಾ ಹಾಗೂ ಗೋಕಾಕದ ಅರ್ಬಾಜ ಶಬಾಸಖಾನ ಎಂದು ಗುರುತಿಸಲಾಗಿದೆ.ಬಂಧಿತರಿಂದ ಹೆರಾಯಿನ್’ನ 87 ಪ್ಯಾಕೆಟ್ ಗಳು, ಗಾಂಜಾ, ಕಾರು ಮತ್ತು ಮೋಟರ್ ಸೈಕಲ್’ನ್ನು ವಶಕ್ಕೆ ಪಡೆದಿದ್ದಾರೆ.
ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ತಮ್ಮ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಹೆರಾಯಿನ್ ನನ್ನು ಬೆಳಗಾವಿಯಿಂದ ತೆಗೆದುಕೊಂಡು ಬಂದು, ಅರ್ಬಾಜ ಶಬಾಸಖಾನ ಎಂಬಾತನಿಗೆ ಮಾರಾಟ ಮಾಡುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಇದೇ ವೇಳೆ ದಾಳಿ ನಡೆಸಿ ಪೆನ್ನಿ ಮಾದಕ ವಸ್ತು ಮತ್ತು ಗಾಂಜಾ ಮಾದಕ ವಸ್ತುವನ್ನು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ