ಬೆಳಗಾವಿ : ಟೀಮ್ ಇಂಡಿಯಾದ ಮಾಜಿ ಬೌಲರ್ ಆಶಿಶ್ ನೆಹ್ರಾ ಅವರು ಜಿಲ್ಲೆಯ ಖಾನಾಪುರದ ಬಸವೇಶ್ವರ ವೃತ್ತದಲ್ಲಿರುವ ಅಕ್ವಾ ಬ್ಲೂ ಸ್ಕೈ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸವಿದಿದ್ದಾರೆ.
ತಮ್ಮ ಸಂಗಡಿಗರೊಂದಿಗೆ ರಸ್ತೆ ಮಾರ್ಗವಾಗಿ ಗೋವಾದಿಂದ ಪುಣೆಗೆ ತೆರಳುತ್ತಿದ್ದ ಅವರು ನಿನ್ನೆ ಮಾರ್ಗ ಮಧ್ಯದಲ್ಲಿ ಸಾಮಾನ್ಯ ಗ್ರಾಹಕರಂತೆ ಹೋಟೆಲ್ ಗೆ ಭೇಟಿ ನೀಡಿದ್ದರು.
ಅವರನ್ನು ಗುರುತಿಸಿದ ಹೋಟೆಲ್ ಮಾಲೀಕ ಮಹಮ್ಮದ್ ನಂದಗಡಿ ಮಾತನಾಡಿಸಿದ್ದು, ವಿಷಯ ಹಬ್ಬುತ್ತಲೇ ಅಲ್ಲಿದ್ದ ಕ್ರೀಡಾ ಪ್ರೇಮಿಗಳು ಆಶಿಶ್ ನೆಹ್ರಾ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.