spot_img
spot_img
spot_img
34.1 C
Belagavi
Monday, May 29, 2023
spot_img

ಶೀಘ್ರ ಬೆಳಗಾವಿ ಶಾಸಕರಿಗೆ ಗೌನ್ ಕೋಡುತ್ತೇವೆ : ಮಾಜಿ ಶಾಸಕ ರಮೇಶ್ ಕುಡಚಿ 

ವರದಿ : ರತ್ನಾಕರ ಗೌಂಡಿ

ಬೆಳಗಾವಿ : ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರಿಗೆ ಕಾಂಗ್ರೆಸ್ ಪಕ್ಷ ಮಹಾಪೌರ ಮತ್ತು ಉಪ ಮಹಾಪೌರರಹ ಗೌನ್ ನೀಡಲು ಸಜ್ಜಾಗಿದೆ ಎಂದು ಮಾಜಿ ಶಾಸಕ ಕಾಂಗ್ರೆಸ್ ರಮೇಶ್ ಕುಡಚಿ ಕಿಡಿಕಾರಿದ್ದಾರೆ.

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸುತ್ತಾ ಮಾತಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಾಗಿ ವರ್ಷ ಕಳೆದರೂ ಕೂಡ ಮಹಾಪೌರ ಮತ್ತು ಉಪಮಹಾಪೌರ ನೇಮಕ ಆಗದೇ ಇರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷದ ಬಹುಮತ ಇದ್ದರೂ ಕೂಡ ಮಹಾಪೌರ ಆಯ್ಕೆವಾಗುತ್ತಾ ಇಲ್ಲ, ಇಬ್ಬರೂ ಶಾಸಕರಗಳ ಹಿಡಿತದಲ್ಲಿ ಸ್ಥಳೀಯ ಸಂಸ್ಥೆ ಮಹಾನಗರ ಪಾಲಿಕೆ ಸಿಕ್ಕಿಕೊಂಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರದೇ ಇದ್ದರೂ ಕೂಡ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಾಗಿ ಒಂದು ವರ್ಷ ಕಳೆದರೂ ಕೂಡ ಮೇಯರ್ ವನ್ನು ಆಯ್ಕೆ ಮಾಡಲು ವಿಫಲಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯನ್ನು ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದರು ಯಾವ ರೀತಿ ಯೋಜನೆ ಇರಬೇಕು ಯಾವ್ಯಾವ ಕಾಮಗಾರಿಯಾಗಬೇಕು ಎಂದು ಬೆಳಗಾವಿ ಜನತೆ ಯೋಜನೆ ಅನುಷ್ಠಾನಕ್ಕಿಂತ ಮುಂಚೆ ಅವೇಜ್ಞಾನಿಕವಾಗಿ ಯೋಜನೆಯನ್ನು ಪ್ರಾರಂಭಿಸಿ, ಕಳಪೆ ಕಾಮಗಾರಿ ಮಾಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತೀಯ ಜನತಾ ಪಕ್ಷ ಎಂಟು ವರ್ಷಗಳಿಂದ ದೇಶವನ್ನು ಮಾರುವುದು ಮತ್ತು ಖಾಸಗೀಕರಣ ಮಾಡುವುದು ಬಿಟ್ಟರೇ ಯಾವುದೇ ರೀತಿಯ ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಕಾಂಗ್ರೆಸ್ ಪಕ್ಷ ಆಡಳಿತ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನಾವು ಎಲ್ಲಾ ರೀತಿಯಿಂದ ಪ್ರಯತ್ನಪಟ್ಟರು ಕೂಡ ನಮ್ಮ ಮಾತನ್ನು ಅಥವಾ ನಮ್ಮ ಅಭಿಪ್ರಾಯಗಳನ್ನು ಲೆಕ್ಕಕ್ಕೆ ತೆಗೆದು ಕೊಡಲಿಲ್ಲ, ನಮ್ಮ ನಾಯಕರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಮತ್ತು ಸರ್ಕಾರದ ಮಟ್ಟದಲ್ಲಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಕೂಡ ಇದರ ವಿರುದ್ಧವಾಗಿ ನಾವು ಹೋರಾಡಲು ಸಿದ್ಧರಿದ್ದೇವೆ. ಎಂಟು ವರ್ಷಗಳ ಕಾಲಾವಧಿಯಲ್ಲಿ ಸುಮ್ಮನಿದ್ದ ಕಾಂಗ್ರೆಸ್ ಪಕ್ಷ ಚುನಾವಣಾ ಹತ್ತಿರದಲ್ಲಿ ಚುನಾವಣೆ ಗಿಮಿಕ್ ಮಾಡ್ತಾ ಇರೋದು ಎಂದು ಎಂಬ ಪ್ರಶ್ನೆಗೆ ರಮೇಶ್ ಕುಡಚಿ ಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ನಾವು ಯಾವುದೇ ರೀತಿಯ ಚುನಾವಣೆ ಗಿಮಿಕ್ ಮಾಡ್ತಾ ಇಲ್ಲ. ನಮ್ಮ ನಾಯಕರು ಸತೀಶ್ ಜಾರಕಿಹೊಳಿ ಅವರು ಪ್ರಾರಂಭದಿಂದಲೇ ಕಾಮಗಾರಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳ ಮತ್ತು ಸರಕಾರದ ಮಟ್ಟದಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಇದರ ವಿರುದ್ಧ ಹೋರಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನಯ್ ನವಲಗಟ್ಟಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಾಟೀಲ್ ಇತರರು ಉಪಸ್ಥಿತರಿದ್ದರು.

 

Related News

ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ. ಈ...

ಮಣಿಪುರದಲ್ಲಿ ಮತ್ತೆ ತಲೆ ಎತ್ತಿದ ಹಿಂಸಾಚಾರ ಪೊಲೀಸ್‌ ಸೇರಿದಂತೆ ಐವರು ಸಾವು

ಇಂಫಾಲ್‌: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -