ಖಾನಾಪುರ: ಮಾಜಿ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ್ ಸತತವಾಗಿ ಖಾನಾಪುರ ಕ್ಷೇತ್ರ ಅಭಿವೃದ್ಧಿ ನಿಲ್ಲಬಾರದು ಎಂಬ ಪ್ರಯತ್ನದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದಾಗಿ ಅದರ ಲಾಭ ಖಾನಾಪುರ ಕ್ಷೇತ್ರಕ್ಕೆ ದೊರಕಬೇಕು ಎಂಬ ಉದ್ದೇಶದಿಂದಾಗಿ ಈಗಾಗಲೇ ಹಲವು ಸಚಿವರಗಳ ಭೇಟಿ ಮಾಡಿ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ ತಮ್ಮ ಕ್ಷೇತ್ರದ ಮೇಲೆ ಜನತೆಯ ಮೇಲೆ ಇರುವಂತಹ ಪ್ರೀತಿ ಮತ್ತು ಅಭಿವೃದ್ಧಿ ಪರವಾಗಿ ಅವರ ಚಿಂತನೆ ಇಂದಾಗಿ ಖಾನಾಪುರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಪರವಾಗಿ ನಿಲ್ಲಲಿದೆ ಅದರಂಗವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರನ್ನು ಬೇಟಿ ಆಗಿ ಸಚಿವರಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಖಾನಾಪುರ ಕ್ಷೇತ್ರದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಮಾಡುವುದು ಮತ್ತು ತಾಲೂಕಿನಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಆದಷ್ಟು ಬೇಗನೆ ಶಿಕ್ಷಕರ ಕೊರತೆಯನ್ನು ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿದರು, ಸಚಿವರು ಈ ನಿಮ್ಮ ಖಾನಾಪುರಕ್ಷೇತ್ರದ ಎಲ್ಲಾ ಬೇಡಿಕೆ ಮತ್ತು ಸಮಸ್ಯೆಗೆಗಳಿಗೆ ಆದಷ್ಟು ಬೇಗನೆ ಪರಿಹಾರ ಒದಗಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು.