ಬೆಂಗಳೂರು: ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ನಮ್ಮ ವಕೀಲರು ಕೋರ್ಟ್ ಪ್ರೊಸೀಡಿಂಗ್ ನೋಡಿದ್ದಾರೆ, ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ.
ಟ್ರಿಬ್ಯುನಲ್ ನಾರ್ಮ್ಸ್ ಬಗ್ಗೆ, ತಮಿಳುನಾಡಿನಲ್ಲಿ ಎಷ್ಟು ನೀರು ಬಳಕೆಯಾಗಿದೆ ಎಂಬುದನ್ನು ಹೇಳಿಲ್ಲ. ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ. ಈಗಾಗಲೇ ಮಂಡ್ಯ, ಚಾಮರಾಜನಗರ, ಬೆಂಗಳೂರಿನಲ್ಲಿ ಸೇರಿ ಎಲ್ಲಾ ಕಡೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದು, ಇಂದಿನ ಸಭೆಯಲ್ಲಿ ಹೋರಾಟದ ರೂಪು ರೇಷೆ ನಿರ್ಧರಿಸಲಿದ್ದೇವೆ ಎಂದರು.
ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....