ಬೆಳಗಾವಿ: ಸಹೋದರರ ರಮೇಶ್ ಜಾರಕಿಹೊಳಿಗೆ ಈ ಬಾರಿ ಸಂಪುಟದಲ್ಲಿ ಮತ್ತೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಏಪ್ರಿಲ್ ನಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಕೂಡ ಮುಕ್ತಾಯದ ಹಂತದಲ್ಲಿದ್ದು, ಒಂದು ಹಂತದಲ್ಲಿ ಕ್ಲಿಯರ್ ಕೂಡ ಆಗಿದೆ.
ಅಷ್ಟೇ ಅಲ್ಲದೆ ರಮೇಶ್ ವಿರುದ್ಧದ ಪಿಐಎಲ್ ಕೂಡ ಡಿಸ್ ಮಿಸ್ ಆಗಿದೆ. ಹೀಗಾಗಿ ಅವರಿಗೆ ಆದಷ್ಟು ಬೇಗ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇನ್ನು ಸಚಿವ ಸ್ಥಾನಕ್ಕಾಗಿ ವರಿಷ್ಠರ ಜತೆ ನಾವೇನೂ ಮಾತನಾಡಿಲ್ಲ. ಪಂಚರಾಜ್ಯಗಳ ಗೆಲುವಿನ ಬಳಿಕ ಸಿಎಂ ಆಯ್ಕೆಯಲ್ಲಿ ಅವರು ಬ್ಯುಸಿ ಇದ್ದಾರೆ.
ಒಂದು ವೇಳೆ ರಮೇಶ್ ಗೆ ಸಚಿವ ಸ್ಥಾನ ಸಿಕ್ಕರೆ ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗಲಿದೆ. ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರ ಎಲ್ಲಾ ನಿರ್ಧಾರಕ್ಕೆ ನಾವು ಬದ್ಧರು ಎಂದು ಹೇಳಿದರು.