spot_img
spot_img
spot_img
18.7 C
Belagavi
Monday, September 26, 2022
spot_img

ಸ್ಪಾ ಮಾಲೀಕರಿಗೆ ಹೆದರಿಸಿ ಹಣ ವಸೂಲಿ : ಪತ್ರಕರ್ತ ಸೇರಿ ಐವರ ಅರೆಸ್ಟ್

spot_img
spot_img

For Breaking News Download App

ಬೆಂಗಳೂರು: ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿರುವ ಜಯಂತಿನಗರದಲ್ಲಿರುವ ಆಲಯ ಸ್ಪಾ ಆ್ಯಂಡ್ ಸಲ್ಯೂನ್ ಶಾಪ್ ಮಾಲೀಕರಿಗೆ ಹಣ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ನಾಲ್ವರು ಗೃಹ ರಕ್ಷಕರು ಹಾಗೂ ಪತ್ರಕರ್ತ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ತಿಂಗಳಿಂದ ಐವರು ಆರೋಪಿಗಳು ಸ್ನೇಹಿತರಾಗಿದ್ದು, ಅಕ್ರಮವಾಗಿ ಹಣ ಸಂಪಾದನೆ ಮಾಡಲು ಸಂಚು ರೂಪಿಸಿಕೊಂಡು ಜಯಂತಿ ನಗರದ ಆಲಯ ಸ್ಪಾಗೆ ಕಳೆದ ತಿಂಗಳು 26 ರಂದು ಹೋಗಿದ್ದಾರೆ. ಸ್ವತಃ ಆರೋಪಿಗಳು ಕಾಂಡೋಮ್ ಎಸೆದು ನಿಮ್ಮ ಮಸಾಜ್ ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಾ.. ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತೇವೆ ಎಂದು ಬೆದರಿಸಿ 1.60 ಲಕ್ಷ ರೂ.ವಸೂಲಿ ಮಾಡಿದ್ದರು ಎನ್ನಲಾಗ್ತಿದೆ.

ಇನ್ನು ಕಳೆದ ಎರಡು ದಿನಗಳ ಹಿಂದೆ ಸ್ಪಾ ಬಳಿ ಮತ್ತೆ ಬಂದು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದರಿಂದ ಕಂಗಲಾದ ಸ್ಪಾ ಮಾಲೀಕ ರಾಮಮೂರ್ತಿನಗರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -