ಚಾಮರಾಜನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಚಾಮರಾಜನಗರ ಆರಂಭಗೊಂಡಿದೆ. ಆದರೆ ಮೊದಲವೇ ದಿನ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.
ತಮಿಳುನಾಡಿನಿಂದ ಆಗಮಿಸಿದ ರಾಹುಲ್ ಗಾಂಧಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಉದ್ಯಾನವನದ ಒಳಗಡೆ ಅರಣ್ಯ ನಿಯಮ ಉಲ್ಲಂಘಿಸಿದ್ದಾರೆ.
ಹೀಗಾಗಿ ಚಾಮರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ಡಿ.ಪಿ. ಜಗದೀಶ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಿಗೆ ದೂರು ನೀಡೆಲಾಗಿದೆ. ಬಂಡೀಪುರದಿಂದ ಗುಂಡ್ಲುಪೇಟೆಗೆ ಬರುವ ಹುಣಸೆಮರದ ರಸ್ತೆಯ ಬಳಿ ಅರಣ್ಯದೊಳಗೆ ನಿಂತು ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್, ಎಚ್. ಸಿ. ಮಹದೇವಪ್ಪ, ರಾಹುಲ್ ಗಾಂಧಿ ಅರಣ್ಯ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ದೂರಲಾಗಿದೆ.