ಬೆಳಗಾವಿ : ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದ ಘಟನೆ ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶಿವಲಿಂಗಪ್ಪ ಕೊಟಬಾಗಿ ಎಂಬುವರ ಪಾಳು ಬಾವಿಯಲ್ಲಿ ಮೊಸಳೆ ಮರಿ ಪ್ರತ್ಯಕವಾಗಿದೆ. ಮೊಸಳೆಯನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಇದು ಮರಿಯಾದ್ದರಿಂದ ತಾಯಿ ಮೊಸಳೆ ಕೂಡ ಇದೇ ಸ್ಥಳದಲ್ಲಿ ಇರಬಹುದು ಎಂಬ ಆತಂಕ ಎದುರಾಗಿದೆ.
2019ರಲ್ಲಿ ಘಟಪ್ರಭಾ ನದಿಗೆ ಬಂದ ಪ್ರವಾಹದ ಸಂದರ್ಭದಲ್ಲಿ ಮೊಸಳೆಗಳು ಈ ಭಾಗಕ್ಕೆ ಬಂದವು. ಆಗಿನಿಂದ ಮೇಲಿಂದ ಮೇಲೆ ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.