ಬೆಳಗಾವಿ: ರೈತರಿಂದಲೇ ಧಾನ್ಯಗಳನ್ನು ಖರೀದಿ ಮಾಡಲಿ ಅನ್ನಭಾಗ್ಯ ಯೋಜನೆ ಜಾರಿ ಮಾಡಲಿ ಎಂದು ರೈತ ಪರ ಹೋರಾಟಗಾರರು ಸರ್ಕಾರಕ್ಕೆ ಅಗ್ರಹಾರ ಮಾಡಿದ್ದಾರೆ
ಕರ್ನಾಟಕ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಅನ್ನ ಭಾಗ್ಯ ಯೋಜನೆ ಹಸಿದವರಿಗೆ ಹೊಟ್ಟೆ ತುಂಬಿಸುವ ಅತ್ಯಂತ ಮಹತ್ವಾಕಾಂಕ್ಷ ಯೋಜನೆ ಇದಾಗಿದ್ದು ಕರ್ನಾಟಕ ಸರ್ಕಾರ ಅಕ್ಕಿ ಖರೀದಿ ಮಾಡುವುದಕ್ಕೋಸ್ಕರ ಕೇಂದ್ರ ಹಾಗೂ ಅನ್ಯ ರಾಜ್ಯಗಳ ಮೊರೆ ಹೋಗಿರುವುದು ವಿಷಾದನೀಯ ಕರ್ನಾಟಕದಲ್ಲಿ ಬೆಳೆದಿರುವಂತಹ ರೈತರ ಧಾನ್ಯಗಳನ್ನು ಖರೀದಿ ಮಾಡಿ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಬೇಕೆಂದು ರೈತಪರ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ರಾಜ್ಯ ವಿವಿಧ ಆಹಾರ ಪದ್ಧತಿ ಭೌಗೋಳಿಕ ಕ್ಷೇತ್ರಗಳನ್ನು ವಿಂಗಡಿಸಿಕೊಂಡಿದೆ. ಅದರಂತೆ ಆಹಾರ ಪದ್ಧತಿಯಲ್ಲಿ ಕೂಡ ವಿವಿಧತೆ ಇದೆ. ಆದ್ದರಿಂದಾಗಿ ಸರ್ಕಾರ ಆಯಾ ಪ್ರದೇಶಗಳಿಗೆ ಅಕ್ಕಿ, ರಾಗಿ, ಜೋಳ, ಸಿರಿಧಾನ್ಯಗಳನ್ನು ರಾಜ್ಯದ ರೈತರುಗಳಿಂದ ಖರೀದಿ ಮಾಡಿ ಮತ್ತು ಅಪೌಷ್ಟಿಕತೆ, ನಿವಾರಿಸಲು ಸಹಕರಿಸಬೇಕೆಂದು ಈ ವಿವಿಧ ರೈತ ಸಂಘಟನೆಗಳು ಬೆಳಗಾವಿ ಜಿಲ್ಲಾ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದನಗೌಡಮುದುಗಿ ಅಧ್ಯಕ್ಷರು ಭಾರತೀಯ ಕೃಷಿಕ ಸಮಾಜ ಕರ್ನಾಟಕ, ಸಂಜೀವಿನಿ ಕುಲಕರ್ಣಿ, ಶಿವಲೀಲಾ ಮಿಸಾಳೆ, ಸಂಜೀವ್ ದೊಂಗರ್ಗಾಮಿ, ಗೀತಾ ದರೆನವರ್ , ಶಂಕರ್ ದವಳಿ, ರಮೇಶ್ ರಾಮಗೊಂಡ ನವರ್ ವಿವಿಧ ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.