ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿಯಿಂದಾಗಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಖಾನಾಪುರ ತಾಲ್ಲೂಕಿನ ಲೋಂಡಾ ವಲಯದ ಘೋಶೆ ಬಿ ಕೆ ಗ್ರಾಮದಲ್ಲಿ ನಡೆದಿದೆ.
ಬಿಕಾಜಿ ಈರಪ್ಪ ಮಿರಾಶಿ (63 ) ಮೃತರಾಗಿದ್ದು
ತಮ್ಮ ಹೊಲದ ಕೆಲಸದ ನಿಮಿತ್ತವಾಗಿ ಹೊಲಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೆಳಗಿನ ಜಾವ ಕರಡಿ ದಾಳಿ ಮಾಡಿದೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಖಾನಾಪುರ್ ಶಾಸಕ ವಿಠ್ಠಲ್ ಹಲಗೆ ಕರ್ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಲೋಂಡಾ ವಲಯ ಅರಣ್ಯ ಅಧಿಕಾರಿ ನಾಗರಾಜ್ ಭೀಮ್ ಗೋಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು